alex Certify
ಕನ್ನಡ ದುನಿಯಾ       Mobile App
       

Kannada Duniya

ಯಶವಂತ್ ಸಿನ್ಹಾಗೆ ಜೇಟ್ಲಿ ತಿರುಗೇಟು

ನವದೆಹಲಿ: ನೋಟ್ ಬ್ಯಾನ್ ಬಳಿಕ ಆರ್ಥಿಕ ಸ್ಥಿತಿ ಸರಿ ಇಲ್ಲ. ಇದಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ನಿರ್ಧಾರಗಳೇ ಕಾರಣ ಎಂದು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಹೇಳಿರುವುದಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.

80 ವರ್ಷದ ಉದ್ಯೋಗಾಕಾಂಕ್ಷಿ ಕೆಲಸಕ್ಕೆ ಅರ್ಜಿ ಹಾಕಿದಂತಿದೆ ಎಂದು ಸಿನ್ಹಾ ಅವರ ಹೆಸರು ಹೇಳದೇ ಟೀಕಿಸಿದ ಜೇಟ್ಲಿ, ಹಣಕಾಸು ಸಚಿವರಾಗಿ ಅವರ ಆರ್ಥಿಕ ನೀತಿಗಳೇನು ಎಂಬುದನ್ನು ತಿಳಿಯಲಿ. ಬೇರೆ ಪಕ್ಷದವರ ರೀತಿಯಲ್ಲಿ ಟೀಕೆಗಾಗಿ ಟೀಕೆ ಮಾಡಬಾರದು ಎಂದು ಹೇಳಿದ್ದಾರೆ.

ನೋಟ್ ಬ್ಯಾನ್ ಬಳಿಕ ಕಾಳಧನಿಕರಿಗೆ ಕಡಿವಾಣ ಬಿದ್ದಿದೆ. ಜಿ.ಎಸ್.ಟಿ. ಜಾರಿಯಾದ ಬಳಿಕ ತೆರಿಗೆದಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ವಿವಿಧ ವಲಯಗಳಲ್ಲಿ ಆರ್ಥಿಕ ಚೇತರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.

ಭಾರತದ ಆರ್ಥಿಕತೆ ಕುಸಿದಿದೆ ಎಂದು ಅಂಕಣ ಬರೆಯಲಾಗಿದೆ. ನಾನು ಅಂಕಣಕಾರ ಹಣಕಾಸು ಸಚಿವನಲ್ಲ ಎಂದು ಹೇಳಲು ಬಯಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...