alex Certify
ಕನ್ನಡ ದುನಿಯಾ       Mobile App
       

Kannada Duniya

ಇಪಿಎಫ್ ತೆರಿಗೆಯಿಂದ ಹಿಂದೆ ಸರಿದ ಕೇಂದ್ರ ಸರ್ಕಾರ

ArunJaitley_PTI_NEW

ಕಾರ್ಮಿಕರ ಭವಿಷ್ಯ ನಿಧಿ ಮೇಲೆ ತೆರಿಗೆ ಹೇರುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾಪವನ್ನು ಹಿಂಪಡೆಯುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದು, ಕಾರ್ಮಿಕರ ಮೊಗದಲ್ಲಿ ಮತ್ತೆ ಮಂದಹಾಸ ಮಿನುಗಿದೆ.

ಹೌದು. ಕಳೆದ ವಾರವಷ್ಟೇ ಹಣಕಾಸು ಬಜೆಟ್ ಮಂಡಿಸಿದ್ದ ಜೇಟ್ಲಿ, 2016 ರ ಏಪ್ರಿಲ್ 1ರ ನಂತರ ಇಪಿಎಫ್ ಖಾತೆಗೆ ಜಮೆಯಾಗುವ ಮೊತ್ತದ ಪೈಕಿ ಹಿಂಪಡೆಯುವಾಗ ನೌಕರರು ಶೇ.60 ರಷ್ಟು ತೆರಿಗೆ ಪಾವತಿಸಬೇಕು ಎಂದು ತಿಳಿಸಿದ್ದರು. ಹೀಗಾಗಿ ಇಲ್ಲಿಯವರೆಗೂ ತೆರಿಗೆ ಮುಕ್ತವಾಗಿದ್ದ ಇಪಿಎಫ್ ಗೆ ತೆರಿಗೆ ಹೇರಿರುವುದು ನೌಕರ ವರ್ಗದ ಅಸಮಾಧಾನಕ್ಕೆ ಕಾರಣವಾಗಿತ್ತಲ್ಲದೇ ವಿರೋಧ ಪಕ್ಷಗಳೂ ಸಹ ಕಿಡಿ ಕಾರಿದ್ದವು.

ಈ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಾತನಾಡಿ, ಬಜೆಟ್ ವೇಳೆ ಮಾಡಿದ್ದ ಇಪಿಎಫ್ ಮೇಲಿನ ತೆರಿಗೆ ಪ್ರಸ್ತಾಪವನ್ನು ಸರ್ಕಾರ ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದು ಮಾತ್ರವಲ್ಲ ಇಪಿಎಫ್ ಹಿಂಪಡೆಯುವ ವೇಳೆ ರಾಷ್ಟ್ರೀಯ ವಿಮಾ ಯೋಜನೆ (ಎನ್ ಪಿ ಎಸ್) ಗೆ ಶೇ.40 ರಷ್ಟು ವಿನಾಯಿತಿ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...