alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸಚಿವರಿಂದ ಕಾಂಗ್ರೆಸ್ ಸಂಸದರ ‘ಬರ್ತಡೇ’

ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎಂಬ ಮಾತಿದೆ. ಚುನಾವಣೆ ಸಂದರ್ಭ ಹಾಗೂ ಸದನದಲ್ಲಿ ಮಾತ್ರ ಪರ-ವಿರೋಧದ ಮಾತುಗಳು ಕೇಳಿ ಬರುತ್ತವೆ. ಅದರಿಂದಾಚೆಗೆ ಬಹುತೇಕ ಎಲ್ಲರೂ ಉತ್ತಮ ವೈಯಕ್ತಿಕ ಸಂಬಂಧವಿಟ್ಟುಕೊಂಡಿರುತ್ತಾರೆ. ಇದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ.

ಶುಕ್ರವಾರದಂದು ಸಂಸತ್ ನ ಚಳಿಗಾಲದ ಅಧಿವೇಶನದ ಕೊನೆಯ ದಿನವಾಗಿತ್ತು. ಸಂಸದರಿಗೆಲ್ಲ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಔತಣಕೂಟವನ್ನೇರ್ಪಡಿಸಿದ್ದರು. ಅಷ್ಟೇ ಅಲ್ಲ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಅನಂದ್ ಶರ್ಮಾ ಅವರ ಹುಟ್ಟುಹಬ್ಬವನ್ನೂ ಆಚರಿಸಿದ್ದಾರೆ.

ಅರುಣ್ ಜೇಟ್ಲಿ ತಮ್ಮ ಕಛೇರಿಗೆ ಕೇಕ್ ತರಿಸಿದ್ದು, ರವಿಶಂಕರ್ ಪ್ರಸಾದ್ ಸೇರಿದಂತೆ ಹಲವು ಸಚಿವರು, ಸಂಸದರ ಸಮ್ಮುಖದಲ್ಲಿ ಅನಂದ್ ಶರ್ಮಾ ಕೇಕ್ ಕತ್ತರಿಸಿದ್ದಾರೆ. ಅನಂದ್ ಶರ್ಮಾರಿಗೆ ಎಲ್ಲರೂ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...