alex Certify
ಕನ್ನಡ ದುನಿಯಾ       Mobile App
       

Kannada Duniya

ಲೋಕಸಭೆಯಲ್ಲಿ ಜೇಟ್ಲಿ ಬಜೆಟ್ ಮಂಡನೆ ಶುರು

ಲೋಕಸಭೆ ಕಲಾಪ ಆರಂಭವಾಗಿದೆ. ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಂಪ್ರದಾಯದ ಪ್ರಕಾರ ಮೃತರಿಗೆ ಸಂತಾಪ ಸೂಚಿಸಲು ಕಲಾಪವನ್ನು ರದ್ದುಗೊಳಿಸಿ ಒಂದು ದಿನ ರಜೆ ಘೋಷಣೆ ಮಾಡಬೇಕಿತ್ತು. ಆದ್ರೆ ಬಜೆಟ್ ಅಧಿವೇಶನವಾಗಿದ್ದರಿಂದ ಕಲಾಪ ಮುಂದುವರೆಸುವುದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ರು.

ನಂತ್ರ ಇಂಗ್ಲೀಷ್ ನಲ್ಲಿಯೇ ಭಾಷಣ ಶುರು ಮಾಡಿದ ಅರುಣ್ ಜೇಟ್ಲಿ ಮಧ್ಯೆ ಹಿಂದಿಯಲ್ಲಿ ಬಜೆಟ್ ಮಂಡನೆ ಶುರುಮಾಡಿದ್ದಾರೆ. ಕೇಂದ್ರ ಸರ್ಕಾರದ ಸಾಧನೆಗಳನ್ನು ಕಲಾಪದ ಮುಂದಿಡುತ್ತಿದ್ದಾರೆ. ಬಡತನ ನಿರ್ಮೂಲನಗೆ ಗಮನ ನೀಡಿದ್ದೇವೆ. ನಾಲ್ಕು ವರ್ಷಗಳ ಹಿಂದೆ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವತ್ತ ಹೆಜ್ಜೆಯಿಟ್ಟಿದ್ದೇವೆ ಎಂದು ಜೇಟ್ಲಿ ಹೇಳಿದ್ದಾರೆ.

ನಾಲ್ಕು ವರ್ಷಗಳಿಂದ ಸ್ವಚ್ಛ ಆಡಳಿತ ನೀಡಿದ್ದೇವೆ. ಆರ್ಥಿಕ ಸುಧಾರಣೆಗೆ ಮಹತ್ವ ನೀಡಿದ್ದೇವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...