alex Certify
ಕನ್ನಡ ದುನಿಯಾ       Mobile App
       

Kannada Duniya

ಅರುಣ್ ಜೇಟ್ಲಿಗೆ ರಕ್ಷಣಾ ಸಚಿವಾಲಯದ ಜವಾಬ್ಧಾರಿ

arunjaitley700

ರಕ್ಷಣಾ ಸಚಿವಾಲಯದ ಹೊಣೆ ಅರುಣ್ ಜೇಟ್ಲಿ ಅವರ ಹೆಗಲೇರಿದೆ. ಈ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮನೋಹರ್ ಪರಿಕ್ಕರ್ ನಾಳೆ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 2014ರ ಮೇನಿಂದ ನವೆಂಬರ್ ವರೆಗೂ ರಕ್ಷಣಾ ಸಚಿವಾಲಯದ ಹೆಚ್ಚುವರಿ ಜವಾಬ್ಧಾರಿ ಅರುಣ್ ಜೇಟ್ಲಿ ಅವರ ಮೇಲಿತ್ತು.

ಇದೀಗ ಪರಿಕ್ಕರ್ ರಾಜೀನಾಮೆಯಿಂದಾಗಿ ಮತ್ತೆ ಇಲಾಖೆಯ ಹೊಣೆ ಜೇಟ್ಲಿ ಅವರ ಮೇಲೆ ಬಿದ್ದಿದೆ. ಕೇಂದ್ರ ಹಣಕಾಸು ಸಚಿವರೂ ಆಗಿರುವ ಜೇಟ್ಲಿ, ರಕ್ಷಣಾ ಇಲಾಖೆ ಮೇಲೂ ಕಣ್ಣಿಡಲಿದ್ದಾರೆ. ಇನ್ನು ಗೋವಾ ವಿಧಾನಸಭಾ ಚುನಾವಣೆಯಲ್ಲಿ 13 ಸ್ಥಾನ ಗೆದ್ದಿದ್ದ ಬಿಜೆಪಿ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲಿದೆ. ನಾಳೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿರುವ ಮನೋಹರ್ ಪರಿಕ್ಕರ್, ಇನ್ನು 15 ದಿನಗಳೊಳಗೆ ಗೋವಾ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...