alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಕಿ‌ ವಿಶ್ವಕಪ್ ಗೆ ವರ್ಣರಂಜಿತವಾಗಿ ಸಜ್ಜಾದ ಒಡಿಸ್ಸಾ

ತಿಂಗಳಾಂತ್ಯಕ್ಕೆ ಒಡಿಸ್ಸಾದಲ್ಲಿ ಆರಂಭಗೊಳ್ಳಲಿರುವ ಪುರುಷರ ಹಾಕಿ ವಿಶ್ವಕಪ್ ಗೆ ಭುವನೇಶ್ವರ ನವವಧುವಿನಂತೆ ಸಜ್ಜಾಗುತ್ತಿದೆ.

ನ.28 ರಿಂದ ಡಿ.16 ರವರೆಗೆ ನಡೆಯಲಿರುವ‌ ಹಾಕಿ‌ ವಿಶ್ವಕಪ್‌ ವೀಕ್ಷಿಸಲು ಹಲವು‌ ದೇಶಗಳಿಂದ ಸಾವಿರಾರು ಹಾಕಿ‌ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಅವರನ್ನು ಸ್ವಾಗತಿಸಲು ಈಗಾಗಲೇ ಭುವನೇಶ್ವರದ ಪ್ರಮುಖ ರಸ್ತೆ ಬದಿಯ ಗೋಡೆಗಳಿಗೆ ವರ್ಣಚಿತ್ರಗಳನ್ನು ಬಿಡಿಸಿ ಶೃಂಗಾರಗೊಳಿಸಲಾಗಿದೆ.

ಈ ಮೂಲಕ ದೇಶ-ವಿದೇಶದಿಂದ ಆಗಮಿಸುವ ಹಾಕಿ ಪ್ರೇಮಿಗಳಿಗೆ ಒಡಿಸ್ಸಾದ‌ ಕಲೆ, ಸಂಸ್ಕೃತಿ ಹಾಗೂ ಇತಿಹಾಸದ ಬಗ್ಗೆ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ

ಇನ್ನು ಅಂತಾರಾಷ್ಟ್ರೀಯ ಕ್ರೀಡಾಕೂಟ ವೀಕ್ಷಿಸಲು ಬರುವ ಜನರಿಗೆ ಅನುಕೂಲವಾಗಲೆಂದು ಒಡಿಸ್ಸಾ ಸಿಎಂ ನವೀನ್ ಪಟ್ನಾಯಕ್ ಅವರು ಅಧುನಿಕ ‌ತಂತ್ರಜ್ಞಾನವನ್ನು ಒಳಗೊಂಡ ಹಾಗೂ ಜನಸ್ನೇಹಿ ಮೋಬಸ್ ಸೇವೆಯನ್ನು‌ ಜಾರಿಗೊಳಿಸಿದ್ದಾರೆ. ಇದರೊಂದಿಗೆ ಒಡಿಸ್ಸಾ ಸಂಸ್ಕೃತಿಯನ್ನು ‌ಅನಾವರಣಗೊಳಿಸಲು ಸೈಕಲ್ ಟ್ರಿಪ್‌ ಟೂರನ್ನು ಸರಕಾರ ಸಿದ್ದಪಡಿಸಿದೆ.

ಕೆಲದಿನಗಳ‌ ಹಿಂದೆ ಭಾರತೀಯ ಹಾಕಿ‌ ತಂಡದ ನಾಯಕ ಮನ್‌ಪ್ರೀತ್ ಸಿಂಗ್‌, ತವರಿನಲ್ಲಿ ನಡೆಯುವ‌ ಪಂದ್ಯಗಳನ್ನು ಮನೆಯಲ್ಲಿ‌ ಕುಳಿತು‌ ನೋಡದೇ‌ ಮೈದಾನಕ್ಕೆ ಬಂದು ಪ್ರೋತ್ಸಾಹಿಸಿ. ಇದರಿಂದ ತವರು ತಂಡಕ್ಕೆ ಬೆಂಬಲಿಸಿ ಎಂದು‌ ಮನವಿ ಮಾಡುವುದರೊಂದಿಗೆ, ಭಾರತ ತಂಡ ಈ ಬಾರಿ ಬಲಿಷ್ಠವಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...