alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುದ್ಯೋಗಿಗಳಿಗೊಂದು ಗುಡ್ ನ್ಯೂಸ್

ಭಾರತೀಯ ಉದ್ಯಮಗಳ ಒಕ್ಕೂಟ ದೇಶದ ಮೂರು ಕಡೆಗಳಲ್ಲಿ ಅತಿ ದೊಡ್ಡ ಉದ್ಯೋಗ ಮೇಳ ಹಮ್ಮಿಕೊಂಡಿದೆ. 8300ಕ್ಕೂ ಅಧಿಕ ಸರ್ಕಾರಿ ಮತ್ತು ಖಾಸಗಿ ಕಂಪನಿಗಳನ್ನು ಹೊಂದಿರೋ ಸಿಐಐ, ಮಾಡೆಲ್ ಕರಿಯರ್ ಸೆಂಟರ್ ಜೊತೆಗೂಡಿ ಉದ್ಯೋಗ ಮೇಳ ನಡೆಸ್ತಾ ಇದೆ. ಎರಡು ದಿನಗಳ ಈ ಮೇಳದಲ್ಲಿ 14,700 ಉದ್ಯೋಗಗಳು ಸೃಷ್ಟಿಯಾಗಲಿವೆ.

ನಿನ್ನೆಯಿಂದ ಆರಂಭವಾಗಿರೋ ಉದ್ಯೋಗ ಮೇಳ ಇವತ್ತು ಕೂಡ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೂ ನಡೆಯಲಿದೆ.

154 ಕಂಪನಿಗಳ ಮಾಲೀಕರು 14,700 ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದಾರೆ. ಗುರುಗ್ರಾಮ, ಮುಂಬೈ ಮತ್ತು ಚೆನ್ನೈನಲ್ಲಿ ಏಕಕಾಲಕ್ಕೆ ಮೇಳ ನಡೆಯುತ್ತಿದೆ.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು 10,600 ಅಭ್ಯರ್ಥಿಗಳು ಪೂರ್ವ ನೋಂದಣಿ ಮಾಡಿಸಿದ್ದರು. ಆನ್ ಲೈನ್ ಮೂಲಕ ಪ್ರಿ ರಜಿಸ್ಟರ್ ಮಾಡಲು ಅವಕಾಶವಿದೆ. ವಾಕ್ ಇನ್ ಇಂಟರ್ವ್ಯೂನಲ್ಲಿ 18,000 ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

10ನೇ ತರಗತಿ, 12ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ, ಅಂಡರ್ ಗ್ರಾಜ್ಯುಯೇಟ್ಸ್, ಪೋಸ್ಟ್ ಗ್ರಾಜ್ಯುಯೇಟ್ಸ್, ಐಟಿಐ ಓದಿದವರು ಹಾಗೂ ಪಾಲಿಟೆಕ್ನಿಕ್ ಪದವೀಧರರಿಗೂ ಉದ್ಯೋಗಾವಕಾಶವಿದೆ.

ಆ್ಯಕ್ಸಿಸ್ ಬ್ಯಾಂಕ್, ವಿಪ್ರೋ, ಯುರೇಕಾ ಫೋರ್ಬ್ಸ್, ಪಾಲಿಸಿ ಬಜಾರ್ ಸೇರಿದಂತೆ ಹಲವು ಕಂಪನಿಗಳಲ್ಲಿ ಫುಲ್ ಟೈಂ ಹಾಗೂ ಪಾರ್ಟ್ ಟೈಂ ಕೆಲಸದ ಆಫರ್ ಇದೆ.

ಮೇಳದ ವಿವರ ತಿಳಿಯಲು ಅಥವಾ ರಜಿಸ್ಟರ್ ಮಾಡಿಸಲು 0124-4084713 ಸಂಖ್ಯೆಗೆ ಕರೆ ಮಾಡಿ. ಅಥವಾ www.mcc-centre.com ಗೆ ಲಾಗಿನ್ ಆಗಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...