alex Certify
ಕನ್ನಡ ದುನಿಯಾ       Mobile App
       

Kannada Duniya

‘ಪಾಕಿಸ್ತಾನ್ ಜಿಂದಾಬಾದ್’ ಅಂದ್ರಂತೆ ರವಿಶಂಕರ್ ಗುರೂಜಿ: ನಿಜಕ್ಕೂ ಆಗಿದ್ದೇನು..?

shri_shri-696x636

ಜೆ ಎನ್ ಯು ನಲ್ಲಿ ಪಾಕ್ ಪರವಾದ ಘೋಷಣೆ ಮಾಡಿದ್ದಾರೆ ಎಂಬ ಕುರಿತಾಗಿ ಸಾಕಷ್ಟು ವಿವಾದ ನಡೆಯುತ್ತಿರುವ ಬೆನ್ನಲ್ಲಿಯೇ ಇದೀಗ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಶ್ರೀ ರವಿಶಂಕರ್ ಗುರೂಜಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಹೌದು. ಆರ್ಟ್ ಆಫ್ ಲೀವಿಂಗ್ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಮಾತನಾಡಿದ ಶ್ರೀ ರವಿಶಂಕರ್ ಗುರೂಜಿ ಶನಿವಾರ ಲಕ್ಷಾಂತರ ಭಾರತೀಯರ ಮಧ್ಯೆ ಪಾಕಿಸ್ತಾನ ಸಂಸ್ಕೃತಿ ಮತ್ತು ಭಾರತದ ಸಂಸ್ಕೃತಿಯನ್ನು ಹಾಡಿ ಹೊಗಳಿ ಜೈಹಿಂದ್, ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಈ ಸಮಯದಲ್ಲಿ ಪಾಕ್ ನ ಧ್ವಜಗಳು ಹಾರಾಟ ನಡೆಸಿದ್ದು ಸಹ ವಿವಾದಕ್ಕೆ ಕಾರಣವಾಗಿದೆ.

ವಾಸ್ತವವಾಗಿ ನಡೆದಿದ್ದೇನು..?
ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಪಾಕ್ ಸೇರಿದಂತೆ ಹಲವು ರಾಷ್ಟ್ರಗಳು ಪಾಲ್ಗೊಂಡಿದ್ದವು. ಈ ಸಮಯದಲ್ಲಿ ಪಾಕಿಸ್ತಾನದ ಧಾರ್ಮಿಕ ವಿದ್ವಾಂಸ ಮುಫ್ತಿ ಮುಹಮ್ಮದ್ ಸಯೀದ್ ಉಪನ್ಯಾಸ ಮುಗಿಸುತ್ತಿದ್ದಂತೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿದ್ದಾರೆ. ಆ ಸಮಯದಲ್ಲಿ ರವಿಶಂಕರ್ ಗುರೂಜಿ ಅವರೂ ಸಹ `ಜೈ ಹಿಂದ್’ ಎಂಬ ಘೋಷಣೆ ಮಾಡಿದ್ದಾರೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಮಾಧ್ಯಮಗಳು ರವಿಶಂಕರ್ ಗುರೂಜಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿದ್ದಾರೆ ಎಂದು ಆರೋಪಿಸಿದ್ದು, ಇದೀಗ ವಿವಾದ ಸೃಷ್ಟಿಸಿದೆ.

ಇನ್ನು ಸಾಮಾನ್ಯವಾಗಿ ಹಲವು ದೇಶಗಳು ಪಾಲ್ಗೊಂಡಿರುವ ಕಾರ್ಯಕ್ರಮಗಳು ಆಯೋಜನೆಗೊಂಡ ಸಮಯದಲ್ಲಿ ಅಂದರೆ ಅಂತರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳು ನಡೆಯುತ್ತಿರುವ ಸಮಯದಲ್ಲಿ ಆ ದೇಶದ ಧ್ವಜಗಳು ಹಾರಾಡುವುದು ಮಾಮೂಲಾಗಿದ್ದು, ಇಲ್ಲಿಯೂ ಸಹ ಅದೇ ರೀತಿಯ ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...