alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಬಾಸ್ ಸ್ಪರ್ಧಿ ವಿರುದ್ದ ಅರೆಸ್ಟ್ ವಾರೆಂಟ್…!

ರಿಯಾಲಿಟಿ ಶೋ ಬಿಗ್ ಬಾಸ್ 11ರಲ್ಲಿ ಸ್ಪರ್ಧಿಸಿರೋ ಅರ್ಶಿ ಖಾನ್ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ. ತನ್ನ ದೇಹದ ಮೇಲೆ ಭಾರತ ಮತ್ತು ಪಾಕಿಸ್ತಾನ ಧ್ವಜವನ್ನು ಪೇಂಟ್ ಮಾಡಿಕೊಳ್ಳುವ ಮೂಲಕ ಅರ್ಶಿ 2 ಸಮುದಾಯಗಳ ಮಧ್ಯೆ ಸಂಘರ್ಷ ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 3 ತಿಂಗಳುಗಳಿಂದ ಅರ್ಶಿ ಖಾನ್ ವಿಚಾರಣೆಗೆ ಹಾಜರಾಗಿಲ್ಲ. ಹಾಗಾಗಿ ಆಕೆಯ ವಿರುದ್ಧ ಜಲಂಧರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸಿ ಅರ್ಶಿಯನ್ನು ಬಂಧಿಸುವಂತೆ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.

ಆದ್ರೆ ಅರ್ಶಿ ಪರ ವಕೀಲರು ಬಂಧನ ವಾರೆಂಟ್ ಗೆ ತಡೆಯಾಜ್ಞೆ ತಂದಿದ್ದಾರಂತೆ. 2018ರ ಜನವರಿ 15ರವರೆಗೆ ತಡೆಯಾಜ್ಞೆ ಇರೋದ್ರಿಂದ ಅರ್ಶಿ ಸದ್ಯಕ್ಕೆ ಬಂಧನದಿಂದ ತಪ್ಪಿಸಿಕೊಂಡಿದ್ದಾಳೆ. ಅಕ್ಟೋಬರ್ 1ರಿಂದ್ಲೂ ಬಿಗ್ ಬಾಸ್ ಮನೆಯಲ್ಲಿರುವ ಅರ್ಶಿ, ಮೂರು ಬಾರಿ ವಿಚಾರಣೆಗೆ ಗೈರಾಗಿದ್ದಾಳೆ. ಜಲಂಧರ್ ಮೂಲದ ವಕೀಲರೊಬ್ರು ಅರ್ಶಿ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...