alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿಯವರ ವಿದೇಶ ಪ್ರವಾಸಕ್ಕೆ ಖರ್ಚಾಗಿರುವ ಹಣವೆಷ್ಟು ಗೊತ್ತಾ…?

ಭಾರತದ ಪ್ರಧಾನಿಯಾಗಿ‌ ನರೇಂದ್ರ‌ಮೋದಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ, ವಿದೇಶಿ ಪ್ರವಾಸಕ್ಕೆಂದು 1484 ಕೋಟಿ‌ ರೂ. ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ‌. ಸಿಂಗ್, ಏರ್ ಕ್ರಾಫ್ಟ್ ಬಳಕೆ, ಹಾಟ್ ಲೈನ್ ಹಾಗೂ ಚಾರ್ಟರ್ ಪ್ರಯಾಣಕ್ಕಾಗಿ 1484 ಕೋಟಿ ರೂ. ಖರ್ಚಾಗಿದ್ದು, ಇದ್ರಲ್ಲಿ ಪ್ರಮುಖವಾಗಿ 1083 ಕೋಟಿಯನ್ನು‌‌ ಮೋದಿ ಅವರ ವಿಮಾನದ ನಿರ್ವಹಣೆಗೆ ಬಳಸಲಾಗಿದೆ. ಇನ್ನು‌ ಚಾರ್ಟರ್ ಬಳಕೆಗೆ 387 ಕೋಟಿ ಹಾಗೂ ಹಾಟ್ ಲೈನ್ ಗೆಂದು 9 ಕೋಟಿ‌ ಬಳಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಖರ್ಚಾಗಿರುವ ಮೊತ್ತವನ್ನು ಈ‌ ಲೆಕ್ಕದಲ್ಲಿ ಸೇರಿಸಿಲ್ಲ‌ ಹಾಗೂ ಮೋದಿ ಅವರಿಗೆ ನೀಡುವ ರಕ್ಷಣಾ ಸಿಬ್ಬಂದಿಗಳು‌‌‌ ಬಳಸಿದ ಹೆಲಿಕಾಪ್ಟರ್ ವೆಚ್ಚದ ಬಗ್ಗೆಯೂ ಸೇರಿಸಿಲ್ಲ ಎಂದು ಸಚಿವರು‌ ಉತ್ತರಿಸಿದ್ದಾರೆ.

ಪ್ರಧಾನಿಯಾದ ಕೆಲ‌ ವಾರಗಳ‌ ಬಳಿಕ‌ 2014 ಜೂನ್ ನಲ್ಲಿ ಭೂತಾನ್ ಗೆ ಭೇಟಿ‌‌ಯಿಂದ ಆರಂಭವಾಗಿದೆ. ಇಲ್ಲಿಯವರೆಗೆ 84 ದೇಶಗಳಿಗೆ ಅಧಿಕೃತ ಭೇಟಿ‌‌ ನೀಡಿದ್ದಾರೆ. ಆದರೆ ಈ‌ ಎಲ್ಲ ಭೇಟಿಗಳಿಂದ ಭಾರತದ ದ್ವೀಪಕ್ಷಿಯ‌‌ ಸಂಬಂಧ ವೃದ್ಧಿಸಿರುವುದರಿಂದ ಇದನ್ನು ದುಂದು ವೆಚ್ಚ ಎನ್ನಲು‌ ಆಗುವುದಿಲ್ಲ‌‌ ಎಂದು‌ ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...