alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ವರ್ಷಗಳ ಅವಧಿಯಲ್ಲಿ ಪತ್ತೆಯಾದ ಕಪ್ಪು ಹಣವೆಷ್ಟು ಗೊತ್ತಾ?

money-1468ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪತ್ತೆಯಾದ ಕಪ್ಪು ಹಣದ ವಿವರವನ್ನು ಹಣಕಾಸು ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್, ರಾಜ್ಯ ಸಭೆಯಲ್ಲಿ ಪ್ರಕಟಿಸಿದ್ದಾರೆ.

ಕಪ್ಪು ಹಣ ಬಹಿರಂಗಗೊಳಿಸಲು ಕಾಲಾವಕಾಶ ನೀಡಿದ ವೇಳೆ ಒಟ್ಟು 43,829 ಕೋಟಿ ರೂ. ಹಣದ ವಿವರ ಬಹಿರಂಗವಾಗಿದೆ ಎಂದು ಅವರು ತಿಳಿಸಿದ್ದಾರೆ. 648 ಮಂದಿ ತಮ್ಮ ಕಪ್ಪು ಹಣದ ವಿವರ ಬಹಿರಂಗಪಡಿಸಿದ್ದು, ಇವರುಗಳಿಂದ 2,476 ಕೋಟಿ ರೂ. ತೆರಿಗೆ ವಸೂಲಿ ಮಾಡಲಾಗಿದೆ.

ಈ ಯೋಜನೆ ಸೆಪ್ಟೆಂಬರ್ 30, 2016 ರ ವರೆಗೆ ಮುಂದುವರೆಯಲಿದೆ ಎಂದು ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದ್ದಾರೆ. ಇನ್ನಷ್ಟು ಮಂದಿ ತಮ್ಮ ಕಪ್ಪು ಹಣದ ವಿವರವನ್ನು ಬಹಿರಂಗಪಡಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...