alex Certify
ಕನ್ನಡ ದುನಿಯಾ       Mobile App
       

Kannada Duniya

ಹಮಾಲಿ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ 984 ಮಂದಿ ಪದವೀಧರರು

coolie-porterದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಿದೆ. ಕಲಿತ ವಿದ್ಯೆಗೂ ಮಾಡುವ ಕೆಲಸಕ್ಕೂ ಸಂಬಂಧವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಕೆಲಸ ಮೇಲು ಕೀಳಲ್ಲವಾದರೂ ಉದ್ಯೋಗ ಸಿಕ್ಕರೆ ಸಾಕೆಂಬ ಕಾರಣಕ್ಕೆ ಹಮಾಲಿ ಕೆಲಸಕ್ಕೆ ಪದವೀಧರರು ಅರ್ಜಿ ಹಾಕಿರುವ ಶಾಕಿಂಗ್ ವರದಿ ಇಲ್ಲಿದೆ.

ಮಹಾರಾಷ್ಟ್ರಪಬ್ಲಿಕ್ ಸರ್ವೀಸ್ ಕಮೀಷನ್ 2015 ರ ಡಿಸೆಂಬರ್ ನಲ್ಲಿ ಹಮಾಲರ ಐದು ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ವಯೋಮಿತಿಯನ್ನು 18- 33 ವರ್ಷಗಳಿಗೆ ನಿಗದಿಪಡಿಸಿದ್ದು, ವಿದ್ಯಾರ್ಹತೆ 4 ನೇ ತರಗತಿ ಪಾಸಾಗಿರಬೇಕೆಂದು ಹೇಳಲಾಗಿತ್ತು.

ಈ ಹುದ್ದೆಗೆ ಒಟ್ಟು 2,424 ಮಂದಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 984 ಮಂದಿ ಪದವೀಧರರು, 605 ಮಂದಿ 12 ನೇ ತರಗತಿ ಪಾಸಾದವರು, 282 ಮಂದಿ 10 ನೇ ತರಗತಿ ಪಾಸಾದವರು ಹಾಗೂ 177 ಮಂದಿ 10 ನೇ ತರಗತಿ ಒಳಗಿರುವವರಾಗಿದ್ದಾರೆ. ಇದೀಗ ಇವರುಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತಿದ್ದು, ಉತ್ತೀರ್ಣರಾದವರಿಗೆ ಮೌಖಿಕ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...