alex Certify
ಕನ್ನಡ ದುನಿಯಾ       Mobile App
       

Kannada Duniya

ಭದ್ರತಾ ಇಲಾಖೆಯಿಂದ ಹೊರಬಿತ್ತು ಈ ಮಹತ್ವದ ನಿರ್ಧಾರ

ಹೆಚ್ಚು ಕಡಿಮೆ ವರ್ಷದ ನಂತರ ಕೇಂದ್ರ ಭದ್ರತಾ ಸಚಿವಾಲಯ ಆದೇಶಿಸಿದ್ದ ಸೈನ್ಯದ ಪಶು ಸಾಕಾಣೆ ಕೇಂದ್ರಗಳನ್ನು ಮುಚ್ಚುವ ಮಹತ್ವದ ನಿರ್ಧಾರ ಜಾರಿಗೆ ಬರುತ್ತಿದೆ. ಸೈನ್ಯದ ಕಣ್ಗಾವಲಿನಲ್ಲಿದ್ದ ಗೋವುಗಳನ್ನು ದೇಶದ ಪಶು ಸಂಗೋಪನಾ ಇಲಾಖೆಗೆ ಮತ್ತು ಇತರೆ ಕೃಷಿ ಸಂಸ್ಥೆಗಳಿಗೆ ವರ್ಗಾಯಿಸೋದಕ್ಕೆ ಸೈನ್ಯ ನಿರ್ಧರಿಸಿದೆ. ಅದು ಕೂಡ ಪ್ರತಿ ಗೋವಿಗೆ ಕೇವಲ 1000 ರೂಪಾಯಿಯಂತೆ ಸೈನ್ಯದ ಗೋವುಗಳನ್ನ ಇತರೆ ಕಡೆಗಳಿಗೆ ಮಾರಾಟ ಮಾಡಲಾಗುತ್ತಿದೆ.

ಕೇಂದ್ರ ಭದ್ರತಾ ಇಲಾಖೆ ರಾಜ್ಯ ಸಚಿವ ಸುಭಾಷ್ ಭಾಮ್ರೆ ಈ ವಿಚಾರದ ಬಗ್ಗೆ ರಾಜ್ಯ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ದೇಶದ ನಾನಾ ಕಡೆಗಳಲ್ಲಿ ಸೈನ್ಯದ ಉಸ್ತುವಾರಿಯಲ್ಲಿ ನಡೆಯುತ್ತಿದ್ದಂತ 39 ಪಶು ಸಂಗೋಪನಾ ಕೇಂದ್ರಗಳಲ್ಲಿನ ಗೋವುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನಕ್ಕೆ ನೀಡಲಾಗುತ್ತಿದೆಯಂತೆ. ಪ್ರತಿ ಗೋವುಗಳಿಗೆ ತಲಾ 1000 ರೂಪಾಯಿ ನಿಗದಿ ಮಾಡಲಾಗಿದೆಯಂತೆ.

ಕಳೆದ ವರ್ಷ ಆಗಸ್ಟ್ ನಲ್ಲಿ ಭದ್ರತಾ ಇಲಾಖೆ ಸೈನ್ಯದ ಅಧೀನದಲ್ಲಿರುವ ಪಶುಸಂಗೋಪನಾ ಘಟಕಗಳಿಗೆ ಪುನರ್ ಕಾಯಕಲ್ಪ ನೀಡುವ ಕ್ರಮಗಳ ಬಗ್ಗೆ ಯೋಜನೆ ರೂಪಿಸಿತ್ತು. ಆ ಪ್ರಕಾರ ಸೈನ್ಯದ ಉಸ್ತುವಾರಿಯಲ್ಲಿದ್ದ 39 ಪಶುಸಂಗೋಪನಾ ಘಟಕಗಳಲ್ಲಿ 15,000 ಗೋವುಗಳಿವೆಯಂತೆ. ಅವುಗಳ ನಿರ್ವಹಣೆಗಾಗಿ 20,000 ಎಕರೆಗಳಷ್ಟು ಪ್ರದೇಶ ಬೇಕಾಗಿದೆ. ಅಲ್ಲದೇ ಪ್ರತಿ ವರ್ಷ ಈ ಘಟಕಗಳ ನಿರ್ವಹಣೆಗಾಗಿಯೇ 300 ಕೋಟಿ ರೂಪಾಯಿ ಖರ್ಚಾಗುತ್ತಿತ್ತು. ಸೈನ್ಯಕ್ಕೆ ಹಾಲು ಪೂರೈಕೆ ಮಾಡುವ ಉದ್ದೇಶದಿಂದ ಬ್ರಿಟಿಷರು ಜಾರಿಗೆ ತಂದಂತಾ ಯೋಜನೆ ಇದಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...