alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಳವೆ ಬಾವಿಯಿಂದ ಮೃತ್ಯುಂಜಯನಾಗಿ ಬಂದ ಬಾಲಕ

ಮಧ್ಯಪ್ರದೇಶದ ದೇವಾಸ್ ನಲ್ಲಿ ಸತತ 35 ಗಂಟೆಗಳ ಕಾಲ ನಡೆದ ಸೇನಾ ಕಾರ್ಯಾಚರಣೆ ಫಲ ನೀಡಿದೆ. 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 4 ವರ್ಷದ ಬಾಲಕ ಬದುಕಿ ಬಂದಿದ್ದಾನೆ. ನಿನ್ನೆ ರಾತ್ರಿ 10.45ರವೇಳೆಗೆ ಬಾಲಕನನ್ನು ಹೊರತೆಗೆಯಲಾಯ್ತು.

ಶನಿವಾರ ಬೆಳಗ್ಗೆ 11 ಗಂಟೆ ವೇಳೆಗೆ ಹೊಲದಲ್ಲಿ ಆಟವಾಡುತ್ತಿದ್ದ ರೋಶನ್ ಎಂಬ ಬಾಲಕ ಕೊಳವೆ ಬಾವಿಯಲ್ಲಿ ಬಿದ್ದಿದ್ದ. ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯನ್ನು ಸಹ ಕಳುಹಿಸಲಾಯ್ತು. ಪೈಪ್ ಮೂಲಕ ನೀರು ಹಾಗೂ ಆಮ್ಲಜನಕವನ್ನು ಮಗುವಿಗೆ ನೀಡಲಾಗುತ್ತಿತ್ತು.

ಬೋರ್ ವೆಲ್ ಗೆ ಸರಿಸಮನಾಗಿ ಆಳ ಕೊರೆದು ಬಾಲಕನನ್ನು ತೆಗೆಯಲು ಯೋಜಿಸಲಾಗಿತ್ತು. ಆದ್ರೆ ಅದಕ್ಕೆ ಸಾಕಷ್ಟು ಸಮಯ ಹಿಡಿಯುವುದರಿಂದ ಬಾಲಕನ ಪ್ರಾಣಕ್ಕೆ ಅಪಾಯವಾಗಬಹುದೆಂದು ಅದನ್ನು ಕೈಬಿಡಲಾಯ್ತು.

ನಂತರ ಹಗ್ಗವೊಂದನ್ನು ಬಾವಿಯೊಳಕ್ಕೆ ಬಿಟ್ಟು ಅದನ್ನು ಕೈಗೆ ಬಲವಾಗಿ ಕಟ್ಟಿಕೊಳ್ಳುವಂತೆ ಬಾಲಕನಿಗೆ ರಕ್ಷಣಾ ಸಿಬ್ಬಂದಿ ಸೂಚಿಸಿದ್ರು. 4 ವರ್ಷದ ಪುಟ್ಟ ಮಗು ಸಿಬ್ಬಂದಿಯ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದೆ. ಹಾಗಾಗಿ ಸುರಕ್ಷಿತವಾಗಿ ಮೇಲಕ್ಕೆ ಬಂದಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...