alex Certify
ಕನ್ನಡ ದುನಿಯಾ       Mobile App
       

Kannada Duniya

5 ವರ್ಷದ ಕಂದಮ್ಮನ ಮುಂದೆಯೇ ನಡೆದಿತ್ತು ದುರಂತ

ತನ್ನ 5 ವರ್ಷದ ಮಗಳನ್ನು ಶಾಲೆಗೆ ಬಿಡಲೆಂದು ತೆರಳಿದ್ದ ಸೇನಾಧಿಕಾರಿಯೊಬ್ಬರ ಪತ್ನಿ, ಬಸ್ ಡಿಕ್ಕಿ ಹೊಡೆದ ಪರಿಣಾಮ ಪುಟ್ಟ ಮಗಳ ಕಣ್ಣ ಮುಂದೆಯೇ ದುರಂತ ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.

ದ್ವಾರಕಾದ ಸೆಕ್ಟರ್ 5 ರ ನಿವಾಸಿ ಲೆಫ್ಟಿನೆಂಟ್ ಕರ್ನಲ್ ಜೇರಲ್ ಭರತ್ ಎಂಬವರ ಪತ್ನಿ 34 ವರ್ಷದ ಅಲ್ಕಾ ರಾವಲ್ ಮೃತ ಮಹಿಳೆ. ಗುರುವಾರ ಬೆಳಿಗ್ಗೆ ಆಲ್ಕಾ ತಮ್ಮ ಪುತ್ರಿಯನ್ನು ಕರೆದುಕೊಂಡು ಶಾಲೆಗೆ ತೆರಳುವ ಬಸ್ ನಿಲ್ಲುವ ನಿಲ್ದಾಣಕ್ಕೆ ತೆರಳಿದ್ದಾರೆ.

ಆಕೆಯನ್ನು ಬಿಟ್ಟು ರಸ್ತೆ ಕ್ರಾಸ್ ಮಾಡುವ ವೇಳೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಆಲ್ಕಾ ಪ್ರಜ್ಞಾಹೀನರಾಗಿದ್ದು, ಇದೇ ಮಾರ್ಗದಲ್ಲಿ ಆಟೋದಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳು ದಾರಿಹೋಕನ ಸಹಾಯದಿಂದ ಹತ್ತಿರದ ಆಯುಷ್ಮಾನ್ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾರೆ.

ಕಣ್ಣೆದುರೇ ನಡೆದ ಅಪಘಾತ ನೋಡಿ ಬಾಲಕಿ ಆಘಾತಕ್ಕೊಳಗಾಗಿದ್ದು, ಪೋಷಕರು ಮನೆಗೆ ಕರೆದೊಯ್ದಿದ್ದಾರೆ. ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...