alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಜರ್‌ ಗೊಗಾಯ್‌ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು

ಶ್ರೀನಗರ: ಭಾರತೀಯ ಸೇನಾ ಪಡೆಯ ಮೇಜರ್‌ ಲೀತುಲ್‌ ಗೊಗಾಯ್‌ ಅವರ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದು, ಶಿಸ್ತು ಕ್ರಮ ಜರುಗಿಸುವಂತೆ ಭಾರತೀಯ ಸೇನೆಯ ವಿಚಾರಣಾ ನ್ಯಾಯಾಲಯ ಆದೇಶಿಸಿದೆ. ಶ್ರೀನಗರದ ಹೋಟೆಲ್‌ ಒಂದಕ್ಕೆ ಮಹಿಳೆಯ ಜತೆ ಒಳ ಪ್ರವೇಶಿಸಲು ಮುಂದಾದ ಗೋಗಿ ಅವರನ್ನು ಶ್ರೀನಗರ ಪೊಲೀಸರು ಬಂದಿಸಿದ್ದರು. ಈ ಸಂಬಂಧ ಸೇನಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು.

ಸದ್ಯಕ್ಕೆ ಸಲ್ಲಿಕೆಯಾಗಿರುವ ಎಲ್ಲ ದಾಖಲೆಗಳ ಪ್ರಕಾರ, ಗೊಗಾಯ್‌ ತಪ್ಪೆಸಗಿರುವುದು ನಿರೂಪಿತವಾಗಿದೆ. ಸೇನಾಪಡೆಯ ನಿಯಮಗಳನ್ನು ಪಾಲಿಸದೇ ಇರುವುದು ಹಾಗೂ ಕರ್ತವ್ಯ ಲೋಪ ಆರೋಪದಲ್ಲಿ ಮೇಜರ್ ಗೊಗಾಯ್ ಅವರನ್ನು ದೋಷಿ ಎಂದು ಪರಿಗಣಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ವಿಚಾರದಲ್ಲಿ ಇನ್ನೂ ಕಾನೂನು ಪ್ರಕ್ರಿಯೆಗಳು ಸಾಕಷ್ಟಿವೆ. ಸೇನೆಗೆ ಜಡ್ಜ್‌ ಅಡ್ವಕೇಟ್‌ ಜನರಲ್‌(ಜೆಎಜಿ) ಕಡೆಯಿಂದ ಸಾಕ್ಷ್ಯಾಧಾರಗಳನ್ನು ಸಲ್ಲಿಸಬೇಕು. ಹೀಗಾಗಿ ಸಂಪೂರ್ಣವಾಗಿ ಮೇಜರ್‌ ಗೊಗಾಯ್‌ ತಪ್ಪಿತಸ್ಥ ಎಂದು ನಿರ್ಧರಿಸಲು ಇನ್ನೂ ಸಾಕಷ್ಟು ಪ್ರಕ್ರಿಯೆಗಳಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜೆಎಜಿಯಲ್ಲಿನ ನಿವೃತ್ತ ಮೇಜರ್ ಎಸ್‌.ಎಸ್‌. ಪಾಂಡೆ, ಘಟನೆಗೆ ಸಂಬಂಧಿಸಿದಂತೆ ಸತ್ಯಾಂಶಗಳನ್ನು ವಿಚಾರಣಾ ನ್ಯಾಯಾಲಯ ಕಲೆ ಹಾಕಿದೆ. ಈ ವಿಚಾರಣೆ ಸತ್ಯಶೋಧನೆಗಾಗಿಯೇ ಹೊರತು, ವ್ಯಕ್ತಿಯ ವಿರುದ್ಧವಾಗಿ ಅಲ್ಲ. ಮೇಜರ್‌ ಗೊಗಾಯ್‌ ವಿಚಾರದಲ್ಲಿ ಘಟನೆ ನಡೆದಿರುವುದು ಸತ್ಯ ಎಂದು ತಿಳಿದು ಬಂದಿದೆ. ಈ ಹಂತದಲ್ಲಿ ಸಲ್ಲಿಕೆಯಾದ ವಿವರಗಳನ್ನು, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತದೆ. ಆ ಬಳಿಕ ಕಮಾಂಡಿಂಗ್‌ ಆಫೀಸರ್‌ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಗೊಗಾಯ್ ಅವರನ್ನು ಶಿಕ್ಷಿಸುವ ತೀರ್ಪು ಇತ್ಯಾದಿಗಳು ಪ್ರಕಟಗೊಳ್ಳಲು ಕನಿಷ್ಠ 3 ತಿಂಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆ ಅಶಿಸ್ತನ್ನು ಎಂದಿಗೂ ಸಹಿಸಿಲ್ಲ. ಸಹಿಸುವುದೂ ಇಲ್ಲ. ಸೇನೆಯ ಯಾವುದೇ ಅಧಿಕಾರಿ ತನ್ನ ನಡತೆಯಲ್ಲಿ ಎಡವಿದರೆ ಶಿಕ್ಷೆ ಖಚಿತ ಎಂದು ನಿವೃತ್ತ ಮೇಜರ್‌ ಜನರಲ್‌ ಎಸ್‌.ಬಿ. ಅಸ್ಥಾನ ಹೇಳಿದ್ದಾರೆ. ಮೇ 23ರಂದು ಶ್ರೀನಗರ ಹೋಟೆಲ್‌ನಲ್ಲಿ ಮೇಜರ್‌ ಗೊಗಾಯ್‌ ಒಳಹೋಗಲು ಬಿಡದ್ದಕ್ಕೆ ಗದ್ದಲ ಮಾಡಿದ್ದರು.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...