alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ನಟನ ಸಂಬಂಧಿಯಿಂದ ಗಗನಸಖಿಗೆ ಲೈಂಗಿಕ ಕಿರುಕುಳ

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಸೋದರ ಸಂಬಂಧಿ ಅಮಿತ್ ಗಿಲ್ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಮಿತ್ ಗಿಲ್ ಗಗನಸಖಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಬೆದರಿಕೆ ಕೂಡ ಹಾಕಿದ್ದಾನಂತೆ.

ಅಮಿತ್ ಗಿಲ್, ಅರ್ಜುನ್ ರಾಂಪಾಲ್ ಸೋದರಿ ಕೋಮಲ್ ಳನ್ನು ವಿವಾಹವಾಗಿದ್ದಾನೆ. ಆತ ಒಬ್ಬ ಇನ್ವೆಸ್ಟರ್, ನೊಂದ ಗಗನಸಖಿ ಆತನ ಕ್ಲೈಂಟ್ ಆಗಿದ್ದಳು. ಆನಂದ್ ವಿಲ್ಲಾದಲ್ಲಿರೋ ತನ್ನ ಮನೆಗೆ ಅವಳನ್ನು ಕರೆಸಿ, ಮತ್ತು ಬರಿಸುವ ಪದಾರ್ಥ ಬೆರೆಸಿ ಅಮಿತ್ ಅವಳಿಗೆ ತಂಪು ಪಾನೀಯ ಕುಡಿಸಿದ್ದನಂತೆ.

ನಂತರ ಅವಳ ಅಶ್ಲೀಲ ಫೋಟೋ ಕ್ಲಿಕ್ಕಿಸಿದ್ದಾನೆ. ಅದನ್ನು ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡುವುದಾಗಿ ಅಮಿತ್ ಬೆದರಿಕೆ ಹಾಕಿದ್ದಾನಂತೆ. 6 ಲಕ್ಷ ರೂಪಾಯಿ ಬಡ್ಡಿ ಕೊಡುವುದಾಗಿ ಅಮಿತ್ ಭರವಸೆ ನೀಡಿದ್ದರಿಂದ ಗಗನಸಖಿ ಆತನಿಗೆ 18 ಲಕ್ಷ ರೂಪಾಯಿ ನೀಡಿದ್ದಳು.

ಬಡ್ಡಿ ಹಾಗಿರಲಿ, ಅಸಲನ್ನೂ ಪೂರ್ತಿಯಾಗಿ ಕೊಡದೇ ಅಮಿತ್ ಆಕೆಗೆ ಸತಾಯಿಸುತ್ತಿದ್ದಾನೆ. ಅಮಿತ್ ಕೊಟ್ಟಿರೋ ಚೆಕ್ ಕೂಡ ಬೌನ್ಸ್ ಆಗಿದೆ ಅಂತಾ ಗಗನಸಖಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಕೇವಲ 12 ಲಕ್ಷ ರೂಪಾಯಿ ಹಿಂದಿರುಗಿಸಿರೋ ಅಮಿತ್, ಬಾಕಿ ಹಣ ಕೇಳಿದ್ರೆ ಈ ರೀತಿ ಬೆದರಿಸುತ್ತಿದ್ದಾನೆ ಅಂತಾ ಯುವತಿ ದೂರು ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...