alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಟ್ಟೆ ಪ್ರಿಯರನ್ನು ಬೆಚ್ಚಿ ಬೀಳಿಸುತ್ತೆ ಈ ಸುದ್ದಿ..!

egg

ಮೊಟ್ಟೆ ಒಂದು ಸಂಪೂರ್ಣ ಆಹಾರ. ಎಷ್ಟೋ ಜನರ ಫೇವರಿಟ್ ಫುಡ್. ಆದ್ರೆ ಇನ್ಮೇಲೆ ಮೊಟ್ಟೆ ತಿನ್ನುವ ಮುನ್ನ ಜಾಗರೂಕರಾಗಿರಿ. ನೀವು ಇಷ್ಟಪಟ್ಟು ಸವಿದ ಮೊಟ್ಟೆ ನಿಮ್ಮ ಪ್ರಾಣಕ್ಕೇ ಮಾರಕವಾಗಬಹುದು. ಹೌದು, ಯಾಕಂದ್ರೆ ಈಗ ಮೊಟ್ಟೆ ವ್ಯಾಪಾರದಲ್ಲೂ ಕರಾಳ ದಂಧೆಯೊಂದು ಶುರುವಾಗಿದೆ. ಖದೀಮರು ಪ್ಲಾಸ್ಟಿಕ್ ಮೊಟ್ಟೆಯನ್ನು ತಯಾರಿಸಿ ಮಾರಾಟ ಮಾಡ್ತಿದ್ದಾರೆ.

ಕೋಲ್ಕತ್ತಾದ ಮಾರುಕಟ್ಟೆಯಲ್ಲಿ ಈಗಾಗ್ಲೇ ಅಪಾಯಕಾರಿ ಪ್ಲಾಸ್ಟಿಕ್ ಮೊಟ್ಟೆಗಳು ಬಿಕರಿಯಾಗ್ತಿವೆ. ಮಾರ್ಕೆಟ್ ನಲ್ಲಿ ಕೋಳಿ ಮೊಟ್ಟೆ ಬದಲು ಪ್ಲಾಸ್ಟಿಕ್ ಮೊಟ್ಟೆಗಳನ್ನು ಮಾರಾಟ ಮಾಡ್ತಾ ಇರೋ ಬಗ್ಗೆ ಅನಿತಾ ಕುಮಾರ್ ಎಂಬಾಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಭಾರೀ ಮೋಸದ ಜಾಲವೇ ಬೆಳಕಿಗೆ ಬಂದಿದೆ. ಎಲ್ಲಾ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ.

ಅಂಗಡಿಯಿಂದ ಮೊಟ್ಟೆ ಕೊಂಡು ತಂದಿದ್ದ ಅನಿತಾ ಆಮ್ಲೆಟ್ ಮಾಡೋಣ ಅಂತಾ ಅದನ್ನು ಪ್ಯಾನ್ ಮೇಲೆ ಹಾಕಿದ್ದಾಳೆ. ಆದ್ರೆ ಯಾಕೋ ಅದು ಪ್ಲಾಸ್ಟಿಕ್ ನಂತೆ ಕಂಡು ಬಂದಿದೆ. ಕೂಡಲೇ ಅನಿತಾ ಅದಕ್ಕೆ ಬೆಂಕಿ ಹಚ್ಚಿ ಪರೀಕ್ಷಿಸಿದ್ದಳು. ಮೊಟ್ಟೆಗೆ ಭಗ್ ಅಂತಾ ಬೆಂಕಿ ಹೊತ್ತಿಕೊಂಡಿದ್ದು ನೋಡಿ ಅದು ಪ್ಲಾಸ್ಟಿಕ್ ನದ್ದು ಅಂತಾ ಖಚಿತಪಡಿಸಿಕೊಂಡ ಆಕೆ ಪೊಲೀಸರಿಗೆ ದೂರು ನೀಡಿದ್ಲು.

ನೋಡಲು ಥೇಟ್ ಕೋಳಿ ಮೊಟ್ಟೆಯಂತೆಯೇ ಕಾಣುವ ಪ್ಲಾಸ್ಟಿಕ್ ಮೊಟ್ಟೆಗಳ ಮೂಲಕ ಗ್ರಾಹಕರನ್ನು ವಂಚಿಸಲಾಗ್ತಿದೆ. ಜನರ ಪ್ರಾಣದ ಜೊತೆ ವ್ಯಾಪಾರಿಗಳು ಚೆಲ್ಲಾಟವಾಡ್ತಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿರುವ ಪೊಲೀಸರು ಕೋಳಿ ಫಾರ್ಮ್ ಗಳ ಮೇಲೆ ಕೂಡ ದಾಳಿ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...