alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರ ಮುಖದಲ್ಲಿ ಮಂದಹಾಸ ಮೂಡಿಸಿದೆ ವಿದ್ಯಾರ್ಥಿಯ ಈ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿಯವರು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಕುರಿತಂತೆ ಎಕ್ಸಾಂ ವಾರಿಯರ್ ಎಂಬ ಪುಸ್ತಕ ರಚಿಸಿದ್ದು, ಇದು ಈಗಾಗಲೇ ಬಿಡುಗಡೆಯಾಗಿದೆ. ಇದರ ನಡುವೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಮೋದಿಯವರು ಪರೀಕ್ಷಾ ಪರ್ ಚರ್ಚಾ ಸಂವಾದ ಕಾರ್ಯಕ್ರಮ ನಡೆಸಿದ್ದಾರೆ.

ನವದೆಹಲಿಯ ತಲಕಟೋರಾ ಕ್ರೀಡಾಂಗಣದಲ್ಲಿ ಶುಕ್ರವಾರದಂದು ಈ ಕಾರ್ಯಕ್ರಮ ನಡೆದಿದ್ದು, 3 ಸಾವಿರ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಲ್ಲದೇ ದೇಶಾದ್ಯಂತ ಸಹಸ್ರಾರು ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದಾರೆ.

ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಯಾವುದೇ ಆತಂಕ, ಉದ್ವೇಗ ಹಾಗೂ ಒತ್ತಡಕ್ಕೊಳಗಾಗಬಾರದು. ಪೋಷಕರು ಸಹ ತಮ್ಮ ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದಿದ್ದಾರೆ ಮೋದಿ. ಈ ಸಂದರ್ಭದಲ್ಲಿ ಗಿರೀಶ್ ಸಿಂಗ್ ಎಂಬ 11 ನೇ ತರಗತಿ ವಿದ್ಯಾರ್ಥಿ, ನರೇಂದ್ರ ಮೋದಿಯವರಿಗೆ ಕೇಳಿದ ಪ್ರಶ್ನೆಯೊಂದು ಪ್ರಧಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ, ನೀವು ಆ ಪರೀಕ್ಷೆಗೆ ಹೇಗೆ ತಯಾರಿ ನಡೆಸಿದ್ದೀರಿ. ನಿಮಗೂ ಆತಂಕ ಕಾಡುತ್ತಿದೆಯೇ ಎಂದು ಗಿರೀಶ್ ಸಿಂಗ್ ಕೇಳಿದಾಗ, ಮುಗುಳ್ನಕ್ಕು ಅದಕ್ಕೆ ಉತ್ತರಿಸಿದ ನರೇಂದ್ರ ಮೋದಿಯವರು, ದೇಶದ ಜನ ತಮ್ಮ ಜೊತೆಯಿರುವಾಗ ಒತ್ತಡಕ್ಕೊಳಗಾಗುವ ಅಗತ್ಯವಿಲ್ಲವೆಂದಿದ್ದಾರೆ. ಅಲ್ಲದೇ ಈ ಪ್ರಶ್ನೆ ಕೇಳಿದ ಗಿರೀಶ್ ಸಿಂಗ್ ಗೆ ನೀನ್ಯಾಕೆ ಪತ್ರಕರ್ತನಾಗಬಾರದು ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...