alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮಗೂ ದೊರೆಯುತ್ತಾ ‘ಆಯುಷ್ಮಾನ್ ಭಾರತ್’ ಪ್ರಯೋಜನ…? ಇಲ್ಲಿ ಚೆಕ್ ಮಾಡಿ

72 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆಗಳನ್ನ ಪ್ರಕಟಿಸಿದರು. ಅದರಲ್ಲಿ ತುಂಬಾನೇ ಮುಖ್ಯವಾದದ್ದು ಆಯುಷ್ಮಾನ್ ಭಾರತ್. ದೇಶದ ಹತ್ತು ಕೋಟಿ ನಾಗರಿಕರಿಗೆ ತಲುಪಲಿರುವ ಈ ಆರೋಗ್ಯ ವಿಮಾ ಪಾಲಿಸಿ ಪ್ರಸಕ್ತ ವರ್ಷದ ಸೆಪ್ಟೆಂಬರ್ 25 ನೇ ತಾರೀಕಿನಿಂದ ಜಾರಿಗೆ ಬರಲಿದೆ.

10 ಕೋಟಿ ನಾಗರಿಕರಿಗೆ, ಪ್ರತಿ ಕುಟುಂಬಕ್ಕೆ ಪ್ರತಿ ವರ್ಷಕ್ಕೆ 5 ಲಕ್ಷ ರೂಪಾಯಿ ವಿಮಾ ಸೌಲಭ್ಯ ಒದಗಿಸೋದೇ ಮೋದಿ ಆಯುಷ್ಮಾನ್ ಯೋಜನೆಯ ಉದ್ದೇಶವಾಗಿದೆ. ಯೋಜನೆಯಡಿಯಲ್ಲಿ ನೊಂದಾಯಿಸಿಕೊಂಡ ಜನರು ಮತ್ತು ಕುಟುಂಬ ವರ್ಗ ಆಸ್ಪತ್ರೆಯ ಚಿಕಿತ್ಸೆಗೆ ಹಣ ನೀಡುವ ಅಗತ್ಯ ಇರೋದಿಲ್ಲ. ಖಾಸಗಿ ವಿಮಾ ಪಾಲಿಸಿಗಳಲ್ಲಿ ಕಾಯುವಿಕೆಯ ಅವಧಿ ಇರುತ್ತದೆ. ಆದ್ರೆ ಆಯುಷ್ಮಾನ್ ಭಾರತ್ ವಿಮಾ ಯೋಜನೆಯ ಮೊದಲ ದಿನದಿಂದಲೇ ಶುರುವಾಗುತ್ತದೆ.

ಹಾಗಾದ್ರೆ ಆ 10 ಕೋಟಿ ಮಂದಿಯಲ್ಲಿ ನಿಮ್ಮ ಕುಟುಂಬವೂ ಆಯುಷ್ಮಾನ್ ಭಾರತದ ಯೋಜನೆಯ ಭಾಗವಾಗೋದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಕೆಲವು ಸರಳ ಸೂತ್ರಗಳಿವೆ. ಆಯುಷ್ಮಾನ್ ಭಾರತದ ಯೋಜನೆ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಎರಡು ಪ್ರಕಾರಗಳಲ್ಲಿ ಜಾರಿಗೆ ಬರಲಿದೆ.

ಗ್ರಾಮೀಣ ಭಾರತದಲ್ಲಿ ಆಯುಷ್ಮಾನ್ ಭಾರತದ ವಿಮಾ ಸೌಲಭ್ಯ ಪಡೆಯುವವರನ್ನ ಹತ್ತು ಅಂಶಗಳ ಮಾನದಂಡಗಳ ಆಧಾರದಲ್ಲಿ ವರ್ಗೀಕೃತಗೊಳಿಸಲಾಗಿದೆ. ಉದಾಹರಣೆಗೆ ಬುಡಕಟ್ಟು ಸಮುದಾಯಗಳ ಜನರು, ಹಿಂದುಳಿದ ವರ್ಗಗಳ ಸಮುದಾಯ, ಮಹಿಳಾಧಾರಿತ ಕುಟುಂಬ, ಕೃಷಿ ಭೂಮಿ ಇಲ್ಲದವರು, ಕುಟುಂಬದಲ್ಲಿ ಅಂಗವಿಕರ ಸದಸ್ಯರನ್ನು ಹೊಂದಿರುವವರು ಹೀಗೆ 10 ವಿವಿಧ ಸ್ಥರದ ಜನರು ಆಯುಷ್ಮಾನ್ ಭಾರತದ ಪ್ರಯೋಜನ ಪಡೆಯಬಹುದಾಗಿದೆ.

ಇನ್ನು ನಗರ ಪ್ರದೇಶಗಳಲ್ಲಿನ ನಾಗರಿಕರು 11 ಅಂಶಗಳ ಮಾನದಂಡಗಳಲ್ಲಿ ವಿಭಾಗಿಸಲಾಗಿದೆ. ಭಿಕ್ಷುಕರಿಂದ ಹಿಡಿದು ದಿನಗೂಲಿಯವರು, ಪೌರ ಕಾರ್ಮಿಕರು, ಗಾರೆ ಕೆಲಸದವರು, ಮನೆಯಿಂದಲೇ ಉದ್ಯೋಗ ಮಾಡುವವರು, ಅಂಗಡಿಯಲ್ಲಿ ಕೆಲಸ ಮಾಡುವ ವರ್ಗ ಸೇರಿದಂತೆ 11 ವಿವಿಧ ಕಾರ್ಯಗಳ ನಾಗರಿಕರು ಆಯುಷ್ಮಾನ್ ಭಾರತದ ಅಡಿಯಲ್ಲಿ ವಿಮಾ ಸೌಲಭ್ಯವನ್ನು ಪಡೆಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...