alex Certify
ಕನ್ನಡ ದುನಿಯಾ       Mobile App
       

Kannada Duniya

ಉಚಿತವಾಗಿ ಒಂದು ವರ್ಷ ಐಸ್ ಕ್ರೀಮ್ ತಿಂದು ತಿಂಗಳಿಗೆ 40 ಸಾವಿರ ಗಳಿಸಿ…!

ಐಸ್ ಕ್ರೀಮ್ ಪ್ರಿಯರು ನೀವಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ಕಂಪನಿಯೊಂದು ಬಂಪರ್ ಆಫರ್ ನೀಡ್ತಿದೆ. ರುಚಿ ರುಚಿ ಐಸ್ ಕ್ರೀಮ್ ತಿನ್ನಲು ನೀಡುವ ಜೊತೆಗೆ ತಿಂಗಳಿಗೆ 10-15 ಸಾವಿರವಲ್ಲ 40 ಸಾವಿರ ರೂಪಾಯಿ ಸಂಬಳ ನೀಡಲಿದೆ.

ಯಸ್. ಹ್ಯಾವ್ ಮೋರ್ ಹೆಸರಿನ ಕಂಪನಿ ಮುಖ್ಯ ಪರೀಕ್ಷಣಾಧಿಕಾರಿ ಹುಡುಕಾಟದಲ್ಲಿದೆ. ಈ ಹುದ್ದೆ ನಿಮ್ಮದಾದ್ರೆ ಐಸ್ ಕ್ರೀಮ್ ತಿಂದು ಅದ್ರ ರುಚಿಯನ್ನು ಆನ್ಲೈನ್ ನಲ್ಲಿ ಅಪ್ಡೇಟ್ ಮಾಡಿದ್ರೆ ಸಾಕು. ತಿಂಗಳಿಗೆ 40 ಸಾವಿರ ರೂಪಾಯಿ ಗಳಿಸಬಹುದು. ಈ ಸಂಬಂಧ ಕಂಪನಿ ಅಹಮದಾಬಾದ್ ನಲ್ಲಿ 3 ದಿನಗಳ ಕಾರ್ಯಾಗಾರ ನಡೆಸಲಿದೆ.ಈ ಕಾರ್ಯಾಗಾರ ಜೂನ್ 15 ರಿಂದ 17 ರವರೆಗೆ ನಡೆಯಲಿದೆ.

ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಕಂಪನಿಯೇ ಎಲ್ಲ ವ್ಯವಸ್ಥೆ ಮಾಡಲಿದೆ. ಜೊತೆಗೆ ಆಯ್ಕೆಯಾದ ಅಭ್ಯರ್ಥಿ ಮನೆಗೆ ಐಸ್ ಕ್ರೀಮ್ ಕಳುಹಿಸಲಿದೆ. ಇದೊಂದು ಪಾರ್ಟ್ ಟೈಂ ಕೆಲಸ. ಇದಕ್ಕಾಗಿ ನೀವು ಬೇರೆ ಕೆಲಸ ಬಿಡುವ ಅಗತ್ಯವಿಲ್ಲ. ಕಂಪನಿ ಹೊಸ ಪ್ಲೇವರ್ ಪ್ರಯೋಗ ಮಾಡುವ ವೇಳೆ ನಿಮಗೆ ಕರೆ ಮಾಡುತ್ತದೆ.

ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ವಿಡಿಯೋ ಅಪ್ಲಿಕೇಷನ್ ಕಳುಹಿಸಬೇಕು. ವಿಡಿಯೋದಲ್ಲಿ ಈ ಕೆಲಸಕ್ಕೆ ಸೇರಲು ನೀವು ಹೇಗೆ ಯೋಗ್ಯರು ಎಂಬುದನ್ನು ಹೇಳಬೇಕು. ನಿಮ್ಮ ಮಾತು ಅವ್ರಿಗೆ ಇಷ್ಟವಾದಲ್ಲಿ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿ https://havmor.com/thecoolestsummerjob ನಲ್ಲಿ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...