alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗೆ ವಿಚಿತ್ರ ಶಿಕ್ಷೆ ನೀಡಿದ್ದಾನೆ ಶಿಕ್ಷಕ…!

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ವಿದ್ಯಾರ್ಥಿಗೆ ಮೂತ್ರ ಬೆರೆಸಿದ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ ಪಿ ಆರ್ ವಿದ್ಯಾ ಕಾನ್ಸೆಪ್ಟ್ ಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ.

5 ವರ್ಷದ ಬಾಲಕನೊಬ್ಬ ತಮಾಷೆಗೆ ಸಹಪಾಠಿಯ ಜ್ಯೂಸ್ ಬಾಟಲಿಯಲ್ಲಿ ಮೂತ್ರ ಬೆರೆಸಿಬಿಟ್ಟಿದ್ದ. ಆಕೆ ಜ್ಯೂಸ್ ಕುಡಿಯಲು ಮುಂದಾದಾಗ ಅದನ್ನು ಕುಡಿಯದಂದೆ ಸೂಚಿಸಿದ್ದಾನೆ. ಬಾಲಕಿ ಕೂಡಲೇ ದೈಹಿಕ ಶಿಕ್ಷಕ ವಿಜಯ್ ಕುಮಾರ್ ಗೆ ವಿಷಯ ತಿಳಿಸಿದ್ಲು.

ವಿದ್ಯಾರ್ಥಿಗೆ ಬುದ್ಧಿ ಕಲಿಸಲು ಮೂತ್ರ ಬೆರೆಸಿದ್ದ ಆ ಜ್ಯೂಸ್ ಕುಡಿಯುವಂತೆ ಶಿಕ್ಷಕರು ಒತ್ತಾಯಿಸಿದ್ದಾರೆ. ಬಾಲಕ ಅಳುತ್ತ ಎಷ್ಟು ಬೇಡಿಕೊಂಡರೂ ಬಿಟ್ಟಿಲ್ಲ. ಈ ಬಗ್ಗೆ ವಿಚಾರಿಸಿದ ವಿದ್ಯಾರ್ಥಿಯ ಪೋಷಕರ ಬಳಿಯೂ ಆತ ಅದೇ ಶಿಕ್ಷೆಗೆ ಅರ್ಹ ಅಂತಾ ಶಿಕ್ಷಕರು ಹೇಳಿದ್ದಾರೆ. ನಂತರ ವಿದ್ಯಾರ್ಥಿಯ ಪೋಷಕರು ದೈಹಿಕ ಶಿಕ್ಷಕನ ವಿರುದ್ಧ ಕೇಸ್ ದಾಖಲಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...