alex Certify
ಕನ್ನಡ ದುನಿಯಾ       Mobile App
       

Kannada Duniya

15 ನಿಮಿಷ ಮನೆಯಲ್ಲಿ ಕುಳಿತು ಈ ಕೆಲಸ ಮಾಡಿದ್ರೆ ಸಿಗುತ್ತೆ 1 ಲಕ್ಷ

ಗಣರಾಜ್ಯೋತ್ಸವದ ಬಗ್ಗೆ ಜನರಲ್ಲಿ ಉತ್ಸಾಹ ತುಂಬಲು ಮೋದಿ ಸರ್ಕಾರ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನೀವು ಬೇರೆ ಎಲ್ಲೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು 1 ಲಕ್ಷ ರೂಪಾಯಿ ಗೆಲ್ಲಬಹುದಾಗಿದೆ.

ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದವರಿಗೆ 75 ಸಾವಿರ ರೂಪಾಯಿ ನಗದು ಹಾಗೂ ಮೂರನೇ ಸ್ಥಾನ ಪಡೆದವರಿಗೆ 50 ಸಾವಿರ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಯಸ್ಸಿನ ಮಿತಿಯಿಲ್ಲ. ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. 18 ವರ್ಷ ಕೆಳಗಿನವರಿಗೆ  ಒಂದು ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಒಂದು ಸ್ಪರ್ಧೆ ನಡೆಯಲಿದೆ.

quiz.mygov.in ಲಾಗಿನ್ ಮಾಡಿದ್ರೆ 15 ಪ್ರಶ್ನೆ ಕೇಳಲಾಗುವುದು. ಪ್ರತಿ ಪ್ರಶ್ನೆಗೆ ಉತ್ತರ ನೀಡಲು 5 ನಿಮಿಷ ಸಮಯ ಸಿಗಲಿದೆ. ಜನವರಿ 1 ಸಂಜೆ 4 ಗಂಟೆಯಿಂದಲೇ ಈ ಸ್ಪರ್ಧೆ ಶುರುವಾಗಿದೆ. ಜನವರಿ 10 ಮಧ್ಯರಾತ್ರಿಯವರೆಗೆ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...