alex Certify
ಕನ್ನಡ ದುನಿಯಾ       Mobile App
       

Kannada Duniya

ಹಸಿವಿಗೆ ಮತ್ತೊಬ್ಬ ಮಹಿಳೆಯ ಬಲಿ…?

ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಆದರೆ ಈ ಕಾರಣಕ್ಕೆ ಪಡಿತರ ನಿರಾಕರಿಸುವಂತಿಲ್ಲವೆಂದು ಸರ್ಕಾರದ ಆದೇಶವಿದ್ದರೂ ಆಧಾರ್ ಕಾರ್ಡ್ ನೋಂದಣಿ ಮಾಡಿಸದ ಕೆಲ ಬಡ ಕುಟುಂಬದವರಿಗೆ ಪಡಿತರ ವಿತರಿಸಲು ನಿರಾಕರಿಸಿದ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಅಲ್ಲದೇ ಪಡಿತರ ದೊರೆಯದ ಕಾರಣ ಹಸಿವಿನಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಜಾರ್ಖಂಡ್ ನಲ್ಲಿ ಮತ್ತೊಬ್ಬ ಮಹಿಳೆ ಹಸಿವಿಗೆ ಬಲಿಯಾಗಿದ್ದಾಳೆಂದು ಹೇಳಲಾಗಿದೆ.

ರಾಂಚಿಯಿಂದ 265 ಕಿ.ಮೀ. ದೂರದ ಕುಗ್ರಾಮವೊಂದರಲ್ಲಿ ವಾಸವಾಗಿರುವ 45 ವರ್ಷದ ಬುದಿನಿ ಸೋರೆನ್ ಎಂಬ ಮಹಿಳೆ ಹಸಿವಿನಿಂದ ಸಾವನ್ನಪ್ಪಿದ್ದು, ಆಧಾರ್ ಕಾರ್ಡ್ ನೋಂದಣಿ ಮಾಡದ ಕಾರಣಕ್ಕೆ ಈ ಕುಟುಂಬಕ್ಕೆ ಪಡಿತರ ವಿತರಿಸಲು ನಿರಾಕರಿಸಲಾಗಿತ್ತೆನ್ನಲಾಗಿದೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಜಿಲ್ಲಾಡಳಿತ, ಮಹಿಳೆ ಕುಟುಂಬಕ್ಕೆ ಪಡಿತರ ನಿರಾಕರಿಸಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಸಾವನ್ನಪ್ಪಿರುವುದಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...