alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೋರ್ವ JNU ವಿದ್ಯಾರ್ಥಿ ನಿಗೂಢ ನಾಪತ್ತೆ…!

ನವದೆಹಲಿಯ ಜವಾಹರ ಲಾಲ್ ನೆಹರು ಯೂನಿವರ್ಸಿಟಿಯ ಮತ್ತೋರ್ವ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಸಂಶೋಧನಾ ವಿದ್ಯಾರ್ಥಿ ಮುಕುಲ್ ಜೈನ್ ಬಗ್ಗೆ ಸೋಮವಾರದಿಂದ ಯಾವುದೇ ಸುಳಿವು ಸಿಕ್ಕಿಲ್ಲ.

ದೆಹಲಿ ಪೊಲೀಸರು ಈಗಾಗ್ಲೇ ಮುಕುಲ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಗಾಜಿಯಾಬಾದ್ ಮೂಲದ ಮುಕುಲ್, ಸೋಮವಾರ ಮನೆಗೆ ವಾಪಸ್ಸಾಗಿಲ್ಲ. ಮನೆಯವರೆಲ್ಲಾ ಆತಂಕಗೊಂಡಿದ್ದು. ಕೊನೆಗೆ ಯೂನಿವರ್ಸಿಟಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಯೂನಿವರ್ಸಿಟಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯನ್ನು ಪರಿಶೀಲಿಸಲಾಗಿದ್ದು, ಮಧ್ಯಾಹ್ನ 12.30ರ ವೇಳೆಗೆ ಮುಕುಲ್ ವಿವಿಯ ಪೂರ್ವಭಾಗದಲ್ಲಿರೋ ಗೇಟ್ ನಿಂದ ಹೊರಹೋಗುತ್ತಿರುವುದು ಸೆರೆಯಾಗಿದೆ.

ಸ್ಕೂಲ್ ಆಫ್ ಲೈಫ್ ಸೈನ್ಸಸ್ ನಲ್ಲಿ ಮುಕುಲ್ ಓದುತ್ತಿದ್ದ. 2016ರ ಅಕ್ಟೋಬರ್ 15ರಂದು ಜೆಎನ್ ಯುನ ಮಾಹಿ ಮಂಡವಿ ಹಾಸ್ಟೆಲ್ ನಿಂದ ನಜೀಬ್ ಅಹ್ಮದ್ ಎಂಬ ವಿದ್ಯಾರ್ಥಿ ಕೂಡ ನಿಗೂಢವಾಗಿ ಕಣ್ಮರೆಯಾಗಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...