alex Certify
ಕನ್ನಡ ದುನಿಯಾ       Mobile App
       

Kannada Duniya

ಓಡಿಶಾದಲ್ಲೊಬ್ಬ ದಶರಥ್ ಮಾಂಜಿ, ಈತ ಮಾಡಿರೋ ಸಾಹಸ ಕೇಳಿದ್ರೆ….

ಓಡಿಶಾದ ಕಂಧಮಾಲ್ ಜಿಲ್ಲೆಯಲ್ಲೊಬ್ಬ ದಶರಥ್ ಮಾಂಜಿಯಿದ್ದಾನೆ. ಜಲಂಧರ್ ನಾಯಕ್ ಎಂಬಾತ ಕಳೆದ 2 ವರ್ಷಗಳಿಂದ ಪ್ರತಿನಿತ್ಯ ಸತತ 8 ಗಂಟೆಗಳ ಕಾಲ ಕೆಲಸ ಮಾಡಿದ್ದಾನೆ. ಒಬ್ಬಂಟಿಯಾಗಿ ಬಂಡೆಗಲ್ಲುಗಳನ್ನು ಒಡೆದು 15 ಕಿಮೀ ಉದ್ದದ ರಸ್ತೆ ನಿರ್ಮಾಣ ಮಾಡಿದ್ದಾನೆ.

ಗುಮ್ಷಿ ಗ್ರಾಮದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಹಾದಿ ಇದು. ಜಲಂಧರ್ ನ ಸಾಮಾಜಿಕ ಕಳಕಳಿ ಮತ್ತು ಸಾಹಸವನ್ನು ಗುರುತಿಸಿರುವ ಆತನನ್ನು ಗೌರವಿಸಿದೆ. ಅಷ್ಟೇ ಅಲ್ಲ MGNREGS ಯೋಜನೆ ಅಡಿಯಲ್ಲಿ ಆತನಿಗೆ ವೇತನ ನೀಡಲು ನಿರ್ಧರಿಸಿದೆ.

ಜಲಂಧರ್ ಶಾಲೆಯ ಮೆಟ್ಟಿಲು ಹತ್ತಿದವನಲ್ಲ. ತನ್ನ ಮಕ್ಕಳಾದ್ರೂ ಚೆನ್ನಾಗಿ ಓದಬೇಕು ಅನ್ನೋ ಆಸೆ ಅವನಿಗೆ. ಆದ್ರೆ ಪ್ರತಿನಿತ್ಯ ಗುಡ್ಡಗಳನ್ನು ಹತ್ತಿಕೊಂಡು ಶಾಲೆಗೆ ಹೋಗುವುದು ಮಕ್ಕಳಿಗೆ ಪ್ರಯಾಸಕರವಾಗಿತ್ತು. ಹಾಗಾಗಿ ರಸ್ತೆ ನಿರ್ಮಾಣ ಮಾಡಲು ಜಲಂಧರ್ ಪಣ ತೊಟ್ಟಿದ್ದ.

ಜಲಂಧರ್ ನ ಈ ಸಾಹಸದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದನ್ನು ಗಮನಿಸಿದ ಕಲೆಕ್ಟರ್, ಆತನನ್ನು ಕಚೇರಿಗೆ ಕರೆಸಿಕೊಂಡು ಮಾಹಿತಿ ಪಡೆದಿದ್ದರು. ಈ ಕಾಮಗಾರಿಯನ್ನು ಪೂರ್ತಿ ಮಾಡಲು ಕಾರ್ಮಿಕರನ್ನು ಒದಗಿಸುವುದಾಗಿಯೂ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...