alex Certify
ಕನ್ನಡ ದುನಿಯಾ       Mobile App
       

Kannada Duniya

”ಮೋದಿ ಮಾತಿನ ಮೇಲೆ ನಂಬಿಕೆಯಿಲ್ಲ”

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನರೇಂದ್ರ ಮೋದಿ ಸರ್ಕಾರದ ವರ್ತನೆಯಿಂದ ಅಸಮಾಧಾನಗೊಂಡಿದ್ದಾರೆ. ಮುಂದಿನ ವರ್ಷಾರಂಭ ಜನವರಿಯಲ್ಲಿಯೇ ದೆಹಲಿಯಲ್ಲಿ ಮೋದಿ ಸರ್ಕಾರದ ವಿರುದ್ಧ ಆಂದೋಲನ ಶುರುಮಾಡಲಿದ್ದಾರೆ. ಮೋದಿ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲವೆಂದು ಅಣ್ಣಾ ಹಜಾರೆ ಆರೋಪಿಸಿದ್ದಾರೆ.

ಪತ್ರಿಕೆಯೊಂದರ ವರದಿ ಪ್ರಕಾರ, ಲೋಕಾಯುಕ್ತ ಹಾಗೂ ಲೋಕಪಾಲ ನೇಮಕ ವಿಚಾರದಲ್ಲಿ ಪಿಎಂ ಯಾವುದೇ ಆಸಕ್ತಿ ತೋರುತ್ತಿಲ್ಲ. ಮೋದಿ ಮಾತಿನ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ. ದೆಹಲಿ ಜನರನ್ನು ಜಾಗೃತಗೊಳಿಸಲು ನಾನು ಆಂದೋಲನ ನಡೆಸುತ್ತೇನೆಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಸರ್ಕಾರ ದೇಶದ ಜನರಿಗೆ ಮೋಸ ಮಾಡ್ತಿದೆ. ಜನರ ನಂಬಿಕೆ ಹೊರಟು ಹೋಗಿದೆ. ಏಷ್ಯಾದ ಭ್ರಷ್ಟರ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ನಾನು ಪ್ರಧಾನಿಗೆ ಪತ್ರ ಬರೆದು ನನಗೆ ನೀಡಿದ್ದ ಭರವಸೆ ಬಗ್ಗೆ ನೆನಪು ಮಾಡುತ್ತಲೇ ಇದ್ದೇನೆ. ಆದ್ರೆ ಪ್ರಯೋಜನ ಶೂನ್ಯ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಹೋರಾಟ ಶುರುಮಾಡುವುದಾಗಿ ಅಣ್ಣಾ ಹಜಾರೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...