alex Certify
ಕನ್ನಡ ದುನಿಯಾ       Mobile App
       

Kannada Duniya

ಹೆತ್ತವರ ಮೇಲಿನ ಕೋಪಕ್ಕೆ ಮನೆ ಬಿಟ್ಟು ಹೊರಟ ಬಾಲಕಿ ತಲುಪಿದ್ದೆಲ್ಲಿಗೆ…?

ಮುಂಬೈನ ಧಾರಾವಿಯಲ್ಲಿ ಬಾಲಕಿಯೊಬ್ಬಳು, ಹೆತ್ತವರ ಬೈಗುಳಕ್ಕೆ ಬೇಸತ್ತು ಮನೆಬಿಟ್ಟು ಹೋಗಿದ್ಲು. ತಂದೆ-ತಾಯಿ ತನಗೆ ಟಿವಿ ನೋಡಲು ಅವಕಾಶ ಕೊಡ್ತಿಲ್ಲ ಅನ್ನೋದು ಅವಳ ಬೇಸರಕ್ಕೆ ಕಾರಣ. ಎಸ್ ಎಸ್ ಎಲ್ ಸಿ ಓದುತ್ತಿದ್ದ ಆಕೆ ಕೊನೆಯ ಪರೀಕ್ಷೆ ಮುಗಿಸಿಕೊಂಡು ರೈಲು ಏರಿ ಕೊಲ್ಹಾಪುರದಲ್ಲಿರೋ ತನ್ನ ಅಜ್ಜಿ ಮನೆಗೆ ಹೊರಟಿದ್ಲು.

ಆದ್ರೆ ಕೊಲ್ಹಾಪುರದ ಬದಲು ಚೆನ್ನೈಗೆ ತೆರಳುವ ರೈಲು ಏರಿದ್ದಾಳೆ. ಮಾರ್ಚ್ 22ರಂದು ಆಕೆ ದಾದರ್ ನಿಂದ ಹೊರಟಿದ್ದಾಳೆ. ಮಾರ್ಚ್ 23ರಂದು ರಾತ್ರಿ 8.30ರವೇಳೆಗೆ ಚೆನ್ನೈ ತಲುಪಿದ್ದಾಳೆ. ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದರಿಂದ ಅವಳು ಎಲ್ಲಿದ್ದಾಳೆ ಅನ್ನೋದನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.

ಕೊನೆಗೆ ಹೆತ್ತವರು ಮಗಳ ಅಪಹರಣವಾಗಿದೆಯೆಂದು ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿ ಚೆನ್ನೈನಲ್ಲಿರುವುದನ್ನು ಪತ್ತೆ ಮಾಡಿದ ಪೊಲೀಸರು, ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಮುಂಬೈನಿಂದ ಚೆನ್ನೈಗೆ ತೆರಳಿದ ಪೋಷಕರು ಬಾಲಕಿಯನ್ನು ವಾಪಸ್ ಕರೆತಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...