alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಕಪಕ್ಕದ ನಿವಾಸಿಗಳ ಮೇಲೆ ಸಿಟ್ಟಿಗೆದ್ದವನು ಮಾಡಿದ್ದೇನು?

car-glass-breakಮದ್ಯಪಾನ ಮಾಡಿ ಸದಾ ಕಿರುಕುಳ ನೀಡುತ್ತಿದ್ದವನ ವರ್ತನೆಗೆ ರೋಸತ್ತ ಅಕ್ಕಪಕ್ಕದ ನಿವಾಸಿಗಳು ಆತನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದೇ ಈಗ ಮುಳುವಾಗಿದೆ. ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಗೊಂಡ ಆತ, ನಿವಾಸಿಗಳ ಕಾರಿನ ಗ್ಲಾಸ್ ಒಡೆದು ಹಾಕಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಇಂತದೊಂದು ಘಟನೆ ಕೋಲ್ಕತ್ತಾದ ಹರೀಶ್ ಮುಖರ್ಜಿ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ 45 ವರ್ಷದ ಪ್ರತಾಪ್ ಗುಪ್ತಾ, ತಾನು ಮಾನವ ಹಕ್ಕು ಸಂಘಟನೆಯೊಂದರ ಕಾರ್ಯಕರ್ತ ಎಂದು ಹೇಳಿಕೊಂಡು ಸ್ಥಳೀಯ ನಿವಾಸಿಗಳಿಗೆ ವಿಪರೀತ ಕಿರುಕುಳ ನೀಡುತ್ತಿದ್ದ. ಪ್ರತಿನಿತ್ಯ ತನ್ನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿಕೊಂಡು ಬರುತ್ತಿದ್ದ ಆತ, ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಹಾನಿ ಮಾಡುತ್ತಿದ್ದಲ್ಲದೇ ಮಹಿಳೆಯರನ್ನೂ ರೇಗಿಸುತ್ತಿದ್ದ.

ಈತನ ವರ್ತನೆಯಿಂದ ರೋಸಿ ಹೋಗಿದ್ದ ನಿವಾಸಿಗಳು ಆತನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನ್ನನ್ನು ಬಂಧಿಸಲು ಬಂದ ವೇಳೆ ಹೈಡ್ರಾಮಾ ಸೃಷ್ಟಿಸಿದ್ದ ಪ್ರತಾಪ್ ಗುಪ್ತಾ, ನಾಯಿಯನ್ನು ಬಿಟ್ಟು ಪೊಲೀಸರನ್ನು ಹಿಮ್ಮೆಟ್ಟಿಸಲು ಯತ್ನಿಸಿದ್ದ. ಬಳಿಕ ತಪ್ಪಿಸಿಕೊಳ್ಳುವ ಭರದಲ್ಲಿ ಕಟ್ಟಡದಿಂದ ಹಾರಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ. ಕಡೆಗೂ ಆತನನ್ನು ಬಂಧಿಸಿದ ಪೊಲೀಸರು, ಎಚ್ಚರಿಕೆ ನೀಡಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು. ಬಿಡುಗಡೆಗೊಂಡ ಪ್ರತಾಪ್ ಗುಪ್ತಾ, ಶುಕ್ರವಾರ ಬೆಳಗಿನ ಜಾವ 3-30 ರ ಸುಮಾರಿಗೆ ಮತ್ತೆ ಮದ್ಯಪಾನ ಮಾಡಿಕೊಂಡು ಬಂದು ಅಕ್ಕಪಕ್ಕದ ನಿವಾಸಿಗಳ 9 ಕ್ಕೂ ಅಧಿಕ ಕಾರುಗಳ ಗ್ಲಾಸ್ ಒಡೆದು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದೀಗ ಪ್ರತಾಪ್ ಗುಪ್ತಾನ ವಿರುದ್ದ ತಿರುಗಿ ಬಿದ್ದಿರುವ ನಿವಾಸಿಗಳು ಆತನ ಮನೆ ಮುಂದೆ ನಿಲ್ಲಿಸಿದ್ದ ಎರಡು ವಾಹನಗಳನ್ನು ಜಖಂಗೊಳಿಸಿದ್ದಾರಲ್ಲದೇ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...