alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಗೆ ಬಲವಂತ ಮಾಡಿದ ಪತಿಯ ಮರ್ಮಾಂಗ ಕಟ್

ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು, ಪತಿಯ ಮರ್ಮಾಂಗವನ್ನು ಹರಿತವಾದ ಚಾಕುವಿನಿಂದ ಕತ್ತರಿಸಿದ್ದಾಳೆ.

ತೆಲಂಗಾಣದ ಕರೀಂನಗರ ಜಿಲ್ಲೆಯ ಸಿದ್ಧಾರ್ಥ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ನಿತ್ಯ ಕುಡಿದು ಮನೆಗೆ ಬರುತ್ತಿದ್ದ ಸಿದ್ಧಾರ್ಥ್ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಅಲ್ಲದೇ, ಲೈಂಗಿಕ ಹಿಂಸೆ ನೀಡುತ್ತಿದ್ದ.

ಗಂಡನ ವರ್ತನೆಯಿಂದಾಗಿ ಪತ್ನಿ ರೋಸಿಹೋಗಿದ್ದಾಳೆ.

ಮತ್ತೆ ಕುಡಿದು ಬಂದು ಜಗಳವಾಡಿದ ಪತಿ ಲೈಂಗಿಕ ಹಿಂಸೆ ನೀಡಲು ಮುಂದಾಗಿದ್ದಾನೆ. ಸಿಟ್ಟಿನಲ್ಲಿದ್ದ ಪತ್ನಿ ಚಾಕುವಿನಿಂದ ಮರ್ಮಾಂಗ ಕತ್ತರಿಸಿದ್ದಾಳೆ.

ಸಿದ್ಧಾರ್ಥ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಹಿಳೆ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...