alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣೆದುರೇ ಮನೆ ಧ್ವಂಸವಾಗುತ್ತಿದ್ದರೂ ಅಸಹಾಯಕವಾಗಿ ನೋಡುತ್ತಿತ್ತು ಆ ಕುಟುಂಬ

ಛತ್ತೀಸ್ಘಡದ ಸರ್ಜಾಪುರದಲ್ಲಿ ಮದವೇರಿದ ಆನೆಯೊಂದು ನಾಡಿಗೆ ಬಂದು ಮನೆಯೊಂದನ್ನು ಧ್ವಂಸಗೊಳಿಸಿದೆ. ಆನೆಯನ್ನು ನೋಡಿ ಭಯಭೀತರಾಗಿದ್ದ ಮನೆಯವರು ಅಸಹಾಯಕತೆಯಿಂದ ಇದನ್ನು ನೋಡುತ್ತ ನಿಂತಿದ್ದರು.

ಕಾಡಿನಿಂದ ಬಂದಿದ್ದ ಈ ಮದಗಜ ಮಣ್ಣಿನ ಮನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಆಹಾರ ಹುಡುಕಾಟ ನಡೆಸಿದ ಆನೆ, ಮನೆಯೊಳಗಿದ್ದ ಸಾಮಾನು ಸರಂಜಾಮುಗಳನ್ನೆಲ್ಲ ಹಾಳುಗೆಡವಿದೆ.

ಏನೂ ಸಿಗದೇ ಹೋದಾಗ ಸುಮ್ಮನೆ ಕಾಡಿಗೆ ವಾಪಸ್ಸಾಗಿದೆ. ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾಳುಗೆಡವಿದೆ ಎಂದು ಅಂದಾಜಿಸಲಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...