alex Certify
ಕನ್ನಡ ದುನಿಯಾ       Mobile App
       

Kannada Duniya

ಎಸಿ ಬಂದ್ ಆಗಿದ್ದಕ್ಕೆ ರೈಲನ್ನೇ ನಿಲ್ಲಿಸಿದ ಪ್ರಯಾಣಿಕರು

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಎಸಿ ಕಾರ್ಯ ನಿರ್ವಹಿಸದ ಕಾರಣ ರೊಚ್ಚಿಗೆದ್ದು ಚೈನ್ ಎಳೆಯುವ ಮೂಲಕ ರೈಲು ನಿಲ್ಲಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ವಿರಾರ್ ನಿಂದ ಚರ್ಚ್ ಗೇಟ್ ಗೆ ಹೋಗಬೇಕಿದ್ದ ಲೋಕಲ್ ರೈಲಿನ ಕೆಲ ಕಂಪಾರ್ಟ್ ಮೆಂಟ್ ಗಳಲ್ಲಿ ಎಸಿ ಕಾರ್ಯಾರಂಭ ಮಾಡಿಲ್ಲ. ಬೊರಿವಿಲಿ ನಿಲ್ದಾಣ ಬಂದರೂ ಎಸಿ ಕಾರ್ಯ ನಿರ್ವಹಿಸದ ಕಾರಣ ಪ್ರಯಾಣಿಕರು ಸಹನೆ ಕಳೆದುಕೊಂಡಿದ್ದಾರೆ.

ಎಸಿ ಬೋಗಿಯಾದ ಕಾರಣ ಗಾಳಿಯಾಡಲು ಅವಕಾಶವಾಗದಂತೆ ಕಿಟಿಕಿಗಳು ಕ್ಲೋಸ್ ಆಗಿದ್ದು, ಇದು ಪ್ರಯಾಣಿಕರ ಸಂಕಷ್ಟವನ್ನು ಹೆಚ್ಚು ಮಾಡಿದೆ. ಕೆಲವರಿಗೆ ಉಸಿರು ಕಟ್ಟಲು ಆರಂಭವಾಗಿದ್ದು, ಆಗ ರೊಚ್ಚಿಗೆದ್ದ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ.

ತಾಂತ್ರಿಕ ದೋಷ ತಲೆದೋರಿದ ಕಾರಣ ಈ ಸಮಸ್ಯೆ ಎದುರಾಗಿದೆ ಎನ್ನಲಾಗಿದ್ದು, ಈಗ ರೈಲಿನ ಸಂಚಾರವನ್ನು ರದ್ದು ಮಾಡಿ ಬದಲಿ ವ್ಯವಸ್ಥೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...