alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ವಿಳಂಬವಾಗಿದ್ದಕ್ಕೆ ಹೊಟ್ಟೆಗೆ ಪೆನ್ ಚುಚ್ಚಿಕೊಂಡ ಪ್ರಯಾಣಿಕ…!

ಚೆನ್ನೈ ವಿಮಾನ ನಿಲ್ದಾಣದಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ವಿಮಾನ ವಿಳಂಬವಾಗಿದ್ದಕ್ಕೆ ಸಿಟ್ಟಿಗೆದ್ದ ಪ್ರಯಾಣಿಕನೊಬ್ಬ, ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿ ಬಳಿಕ ತನ್ನ ಬಳಿಯಿದ್ದ ಪೆನ್ ಅನ್ನು ಹೊಟ್ಟೆಗೆ ಚುಚ್ಚಿಕೊಂಡಿದ್ದಾನೆ.

ಮುಂಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದಲ್ಲಿ 37 ವರ್ಷದ ಈ ಪ್ರಯಾಣಿಕ ಪ್ರಯಾಣಿಸಬೇಕಿದ್ದು, ನಿಗದಿಪಡಿಸಿದ ಸಮಯಕ್ಕಿಂತ ಮೂರು ಗಂಟೆ ವಿಳಂಬವಾದರೂ ವಿಮಾನ ಹಾರಾಟ ನಡೆಸದಿದ್ದಕ್ಕೆ ಆಕ್ರೋಶಗೊಂಡಿದ್ದಾನೆ. ಮೊದಲೇ ಮದ್ಯದ ಅಮಲಿನಲ್ಲಿದ್ದ ಆತ ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ.

ಮುಂಬೈನಿಂದ ತಾನು ಮತ್ತೊಂದು ವಿಮಾನ ಏರಬೇಕಿದ್ದು, ಈಗ ಆ ವಿಮಾನ ತಪ್ಪಿ ಹೋಗುತ್ತದೆ ಎಂದು ಹೇಳಿದ ಪ್ರಯಾಣಿಕ ಹತಾಶೆಯಿಂದ ತನ್ನ ಬಳಿಯಿದ್ದ ಪೆನ್ ನಿಂದ ಹೊಟ್ಟೆಗೆ ಚುಚ್ಚಿಕೊಂಡಿದ್ದಾನೆ. ಇದರಿಂದ ಸ್ವಲ್ಪ ರಕ್ತ ಬಂದಿದ್ದು, ಆತನನ್ನು ಕೂಡಲೇ ವಿಮಾನ ನಿಲ್ದಾಣದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಈ ಅವಧಿಯಲ್ಲಿ ವಿಮಾನ ಹೊರಟು ಹೋಗಿದ್ದು, ಅಂತಿಮವಾಗಿ ವಿಮಾನವನ್ನೇ ಪ್ರಯಾಣಿಕ ಮಿಸ್ ಮಾಡಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...