alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿ ಮನೆಗೆ ಕರೆಸಿಕೊಂಡು ಇಂತಹ ಕೃತ್ಯ

visakpattan-dd

ವಿಶಾಖಪಟ್ಟಣ: ಆಘಾತಕಾರಿ ಘಟನೆಯೊಂದರಲ್ಲಿ ಯುವಕನೊಬ್ಬ ಪ್ರೇಯಸಿಯ ಕತ್ತು ಸೀಳಿ, ತಲೆಯ ಮೇಲೆ ಡಂಬಲ್ಸ್ ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಕೋಸ್ಟಲ್ ಸಿಟಿ ವಿಶಾಖಪಟ್ಟಣದಲ್ಲಿ ನಡೆದಿದೆ.

ಪಾಂಡಾ ಬೀದಿಯ ನಿವಾಸಿ ಸತೀಶ್ ಕುಮಾರ್ ಪ್ರೇಯಸಿಯನ್ನೇ ಕೊಲೆ ಮಾಡಿದ ಆರೋಪಿ. ಭವಾನಿಯನ್ನು ಪ್ರೀತಿಸುತ್ತಿದ್ದ ಸತೀಶ್ ಕುಮಾರ್ ಆಕೆ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡಿದ್ದಾನೆ

ಇದೇ ವಿಚಾರವಾಗಿ ಪ್ರೇಯಿಸಿಯನ್ನು ಮನೆಗೆ ಕರೆಸಿಕೊಂಡು ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಕನ್ನಡಿಯನ್ನು ಒಡೆದು ಗಾಜಿನ ಚೂರಿನಿಂದ ಪ್ರೇಯಸಿಯ ಕುತ್ತಿಗೆ ಇರಿದಿದ್ದಾನೆ.

ಕೆಳಗೆ ಬಿದ್ದ ಆಕೆಯ ತಲೆಯ ಮೇಲೆ ಡಂಬಲ್ಸ್ ಎತ್ತಿ ಹಾಕಿದ್ದು, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಗಾಟ ಕೇಳಿ ಬಂದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಇಬ್ಬರ ಮದುವೆಗೆ ಪೋಷಕರು ಒಪ್ಪಿದ್ದು, ಇತ್ತೀಚೆಗೆ ಸತೀಶ್ ಗೆ ಅಪಘಾತವಾಗಿತ್ತು. ಅದಾದ ಬಳಿಕ ಭವಾನಿ ಮೇಲೆ ಅನುಮಾನ ಪಡುತ್ತಿದ್ದ ಎಂದು ಭವಾನಿಯ ಪೋಷಕರು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...