alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಪ್ರೇಮಿಯೊಂದಿಗೆ ಸೇರಿ ಗಂಡನನ್ನೇ ಕೊಂದಳು…!

ಮದುವೆಯಾದ ಕೇವಲ 10 ದಿನಗಳಲ್ಲಿ ಪತ್ನಿ ತನ್ನ ಮಾಜಿ ಪ್ರೇಮಿಯ ಜೊತೆ ಸೇರಿ ಗಂಡನನ್ನೇ ಕೊಂದ ಘಟನೆ ಆಂಧ್ರ ಪ್ರದೇಶದ ತೋಟಪಲ್ಲಿ ಎಂಬಲ್ಲಿ ನಡೆದಿದೆ.

ಯಮಕ ಶಂಕರ್ ರಾವ್, ಸರಸ್ವತಿ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ ಸರಸ್ವತಿಗೆ ಈ ಮದುವೆ ಇಷ್ಟವಿರಲಿಲ್ಲ. ಜೊತೆಗೆ ಆಕೆಗೆ ಶಿವ ಎಂಬಾತನ ಜೊತೆಗೆ ಅಫೇರ್ ಕೂಡ ಇತ್ತು.

ಮದುವೆಯಾದ ಬಳಿಕ ಆತನನ್ನು ಫೇಸ್ ಬುಕ್ ಮೂಲಕ ಸಂಪರ್ಕಿಸಿದ್ದ ಸರಸ್ವತಿ, ಗಂಡನನ್ನು ಕೊಲೆ ಮಾಡಲು ಹೇಳಿದ್ದಾಳೆ. ಇಬ್ಬರೂ ಸೇರಿ ಶಂಕರ ರಾವ್ ನನ್ನು ಕೊಲೆ ಮಾಡಿದ್ದು, ಘಟನೆ ನಡೆದ 24 ಗಂಟೆಗಳಲ್ಲೇ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.

ಶಾಪಿಂಗ್ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಗಾಡಿ ನಿಲ್ಲಿಸಲು ಸರಸ್ವತಿ ಹೇಳಿದ್ದು, ಹಾಗೆ ನಿಲ್ಲಿಸಿದಾಗ ಶಿವ ಹಾಗೂ ಮತ್ತಿಬ್ಬರು ಮುಸುಕುಧಾರಿಗಳು ಬಂದು ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ತಪ್ಪಿಸಿಕೊಂಡ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...