alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಶಿಕ್ಷಕನ ಬೆತ್ತಲೆ ಮೆರವಣಿಗೆ

ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ್ದ ಆರೋಪದಲ್ಲಿ ಹೈದರಾಬಾದ್ ಶಾಲಾ ಶಿಕ್ಷಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಬೆತ್ತಲೆ ಮೆರವಳಿಗೆ ಮಾಡಿದ ಪ್ರಕರಣ ನಡೆದಿದೆ.

38 ವರ್ಷದ ರಾಮ್ ಬಾಬು ಎಂಬ ಶಿಕ್ಷಕನನ್ನು ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಈ ದೃಶ್ಯ ರಸ್ತೆಯಲ್ಲಿ ಹೋಗುತ್ತಿದ್ದ ದಾರಿಹೋಕ ಸೆರೆ ಹಿಡಿದಿದ್ದಾನೆ.

ಎರಡು ವರ್ಷದ ಹಿಂದೆ ವಿದ್ಯಾರ್ಥಿನಿ 10ನೇ ತರಗತಿಯಲ್ಲಿದ್ದಾಗ ರಾಮ್ ಬಾಬು, ಅತ್ಯಾಚಾರ ಮಾಡಿದ್ದನೆಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿ ಗರ್ಭಿಣಿಯಾದಾಗ ಅವಳಿಗೆ ಗರ್ಭ ನಿರೋಧಕ ಮಾತ್ರೆ ನೀಡಿದ್ದಾನೆ. ವಿದ್ಯಾರ್ಥಿನಿಗೆ ರಕ್ತಸ್ರಾವ ಆದಾಗಲೇ, ಆಕೆಯ ಮೇಲೆ ಅತ್ಯಾಚಾರ ನಡೆದು ಗರ್ಭಿಣಿಯಾಗಿರುವ ವಿಚಾರ ಪೋಷಕರಿಗೆ ಗೊತ್ತಾಗಿದೆ.

ಸ್ಥಳೀಯರು ಹಾಗೂ ಕುಟುಂಬಸ್ಥರು ರಾಮ್ ಬಾಬು ನನ್ನು ಬೆತ್ತಲೆ ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಾಮ್ ಬಾಬುನನ್ನು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...