alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ. ಮೈತ್ರಿ ಮುರಿದುಕೊಂಡ ತೆಲುಗುದೇಶಂ ಪಾರ್ಟಿ

ನವದೆಹಲಿ: ಲೋಕಸಭೆ ಚುನಾವಣೆಗೆ 1 ವರ್ಷ ಉಳಿದಿರುವಾಗಲೇ 48 ಪಕ್ಷಗಳ ಮೈತ್ರಿಕೂಟವಾಗಿರುವ ಎನ್.ಡಿ.ಎ.ನಿಂದ ಒಂದೊಂದೇ ಪಕ್ಷಗಳು ಹೊರಬರುತ್ತಿವೆ. ಶಿವಸೇನೆ ಬಳಿಕ ತೆಲುಗುದೇಶಂ ಪಾರ್ಟಿ ಕೂಡ ಎನ್.ಡಿ.ಎ. ಮೈತ್ರಿಕೂಟದಿಂದ ಹೊರ ಬರಲು ನಿರ್ಧರಿಸಿದೆ.

ಎನ್.ಡಿ.ಎ. ಮೈತ್ರಿಕೂಟದ 3 ನೇ ಅತಿದೊಡ್ಡ ಪಕ್ಷವಾಗಿರುವ ತೆಲುಗುದೇಶಂ ಲೋಕಸಭೆಯಲ್ಲಿ 16 ಹಾಗೂ ರಾಜ್ಯಸಭೆಯಲ್ಲಿ 6 ಸದಸ್ಯರನ್ನು ಹೊಂದಿದ್ದು, ಈ ಪಕ್ಷ ಹೊರ ಬರುತ್ತಿರುವುದರಿಂದ ಎನ್.ಡಿ.ಎ. ಬೆಂಬಲಿತ ಸದಸ್ಯರ ಸಂಖ್ಯೆ ಎರಡೂ ಸದನಗಳಲ್ಲಿ ಕುಸಿತವಾಗಲಿದೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರವಾಗಿ ತೆಲುಗುದೇಶಂ ಮತ್ತು ಬಿ.ಜೆ.ಪಿ. ನಡುವೆ ಹೊಂದಾಣಿಕೆ ಕೊರತೆ ಕಂಡು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಿಂದ ಇಬ್ಬರು ತೆಲುಗುದೇಶಂ ಪಕ್ಷದ ಸಚಿವರು ಹೊರ ಬಂದಿದ್ದರು.

ಬಿ.ಜೆ.ಪಿ. ನಾಯಕರು ಮನವೊಲಿಕೆಗೆ ನಡೆಸಿದ ಕಸರತ್ತು ಫಲಕೊಟ್ಟಿಲ್ಲ. ಇದೇ ವೇಳೆ ಅಮರಾವತಿಯಲ್ಲಿ ತೆಲುಗುದೇಶಂ ಪಕ್ಷದ ನಾಯಕ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎನ್.ಡಿ.ಎ. ಮೈತ್ರಿಕೂಟದಿಂದ ಹೊರಬರಲು ತೀರ್ಮಾನಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...