alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವಿನಿಂದ ರಕ್ಷಣೆ ಪಡೆಯಲು ಯಜ್ಞಕ್ಕೆ ಮುಂದಾದ ಸರ್ಕಾರ

ಹಾವಿನ ದ್ವೇಷ 12 ವರ್ಷ ಎನ್ನುತ್ತಾರೆ. ಹಾವಿನ ದ್ವೇಷದ ಬಗ್ಗೆ ಅನೇಕ ಚಿತ್ರಗಳು, ಧಾರಾವಾಹಿಗಳು ಬಂದು ಹೋಗ್ತಿರುತ್ತವೆ. ರೀಲ್ ಜೀವನದಲ್ಲಿ ಹಾವಿನಿಂದ ಕಚ್ಚಿಸಿಕೊಂಡವರು ವೈದ್ಯರ ಬಳಿ ಹೋಗ್ದೆ ತಂತ್ರ-ಮಂತ್ರಕ್ಕೆ ಶರಣಾಗ್ತಾರೆ. ರಿಯಲ್ ಜೀವನದಲ್ಲಿಯೂ ಇಂಥ ಘಟನೆಗಳು ನಡೆಯುತ್ತಿರುತ್ತವೆ. ಇದಕ್ಕೆ ಆಂಧ್ರಪ್ರದೇಶದ ದಿವಿಸೀಮಾ ಉತ್ತಮ ನಿದರ್ಶನವಾಗಿದೆ.

ದಿವಿಸೀಮಾದಲ್ಲಿ 100 ಮಂದಿ ಹಾವು ಕಚ್ಚಿ ಆಸ್ಪತ್ರೆ ಸೇರಿದ್ದಾರೆ. ಅದ್ರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಔಷಧಿ ಒದಗಿಸುವ ಜೊತೆಗೆ ಹಾವಿನಿಂದ ಜನರಿಗೆ ಹೇಗೆ ರಕ್ಷಣೆ ನೀಡಬೇಕೆಂಬುದ್ರ ಬಗ್ಗೆ ಕ್ರಮಕೈಗೊಳ್ಳುವ ಬದಲು ಸ್ಥಳೀಯ ಸರ್ಕಾರ ದೇವರ ಮೊರೆ ಹೋಗಿದೆ.

ಆಂಧ್ರ ಪ್ರದೇಶ ಸರ್ಕಾರದ ಇಲಾಖೆಯೊಂದು ಆಗಸ್ಟ್ 29 ರಂದು ಮೊಪಿದೇವಿಯಲ್ಲಿರುವ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸರ್ಪ ಶಾಂತಿ ಯಜ್ಞವನ್ನು ಆಯೋಜನೆ ಮಾಡಿದೆ. ಸ್ಥಳೀಯರ ಜೊತೆ ಸೇರಿ ಜನರಲ್ಲಿ ಆತ್ಮವಿಶ್ವಾಸ ತುಂಬಲು ಯಜ್ಞ ಮಾಡುತ್ತಿರುವುದಾಗಿ ಡಿಎಂ ಹೇಳಿದ್ದಾರೆ. ಜನರಿಗೆ ಹಾವಿನಿಂದ ರಕ್ಷಣೆ ಪಡೆಯುವುದು ಹೇಗೆ ಹಾಗೂ ಹಾವನ್ನು ವಸತಿ ಪ್ರದೇಶದಿಂದ ಹೇಗೆ ದೂರವಿರಿಸುವುದು ಎಂಬ ಬಗ್ಗೆ ಮಾಹಿತಿ ನೀಡುವ ಬದಲು ಯಜ್ಞ ಮಾಡುತ್ತಿರುವುದು ಕೆಲವರ ವಿರೋಧಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...