alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದ್ರ ಗ್ರಹಣದ ದಿನದಂದು ನಡೆದಿದೆ ವಿಚಿತ್ರ ಘಟನೆ…!

ಹೈದರಾಬಾದ್‌: ಗುಂಟೂರು ಜಿಲ್ಲೆಯ ಗನ್ನಾವರಮ್‌ ಗ್ರಾಮದಲ್ಲಿ ಚಂದ್ರ ಗ್ರಹಣದ ದಿನ ವಿಚಿತ್ರ ಘಟನೆ ನಡೆದಿದೆ. ಹಾಗೆಂದು ವಿಸ್ಮಯಗಳೇನೂ ಆಗಿಲ್ಲ. ವಿಶೇಷ ದಿನದಂದು, 70 ವರ್ಷದ ವೃದ್ದನೋರ್ವ ಸ್ವಯಂ ಸಮಾಧಿಯಾಗಲು ಮುಂದಾಗಿದ್ದಾನೆ.

ಆಧ್ಯಾತ್ಮದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದ ತಾತಿರೆಡ್ಡಿ ಲಾಚಿರೆಡ್ಡಿ ಎಂಬ ಈ ವೃದ್ದ ಸಮಾಧಿಯೊಳಗೆ ಹೋಗಲು ಸಿದ್ಧವಾಗಿದ್ದರು. ಇದಕ್ಕಾಗಿಯೇ ತಮ್ಮ ಹೊಲದಲ್ಲಿ ಸಕಲ ವ್ಯವಸ್ಥೆಯನ್ನೂ ಮಾಡಿದ್ದ ಲಾಚಿರೆಡ್ಡಿ, ಗ್ರಾಮಸ್ಥರ ಬಳಿ, ಈ ವಿಚಾರದ ಬಗ್ಗೆ ಚರ್ಚಿಸಿದ್ದಾರೆ. ಇದಕ್ಕೆ ಯಾರೊಬ್ಬರೂ ಒಪ್ಪಿಗೆ ಸೂಚಿಸದೆ, ಇದೊಂದು ಅಪರಾಧ ಎಂದು ತಿಳಿ ಹೇಳಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ಲಾಚಿರೆಡ್ಡಿ, ಜಿಲ್ಲಾಧಿಕಾರಿಗಳಿಗೆ, ತಾನು ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಅನುಮತಿ ಕೊಡಬೇಕು. ಬುಧವಾರ ತಾನು ಸಮಾಧಿ ಹೊಂದುವುದಾಗಿ ಪತ್ರ ಬರೆದಿದ್ದಾರೆ.

ವಿಷಯ ತಿಳಿದು ಪೊಲೀಸರೊಂದಿಗೆ ದೌಡಾಯಿಸಿದ ಅಧಿಕಾರಿಗಳು, ಲಾಚಿರೆಡ್ಡಿಯ ಮನವೊಲಿಸಿ, ಮತ್ತೊಮ್ಮೆ ಇಂತಹ ಪ್ರಯತ್ನ ಮಾಡಲಾರೆ ಎಂದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ನನಗೆ ಈ ಭೂಮಿಯಲ್ಲಿ ಇನ್ನು ಮಾಡಲು ಯಾವುದೇ ಕಾರ್ಯಗಳಿಲ್ಲ. ಮಕ್ಕಳು, ಮರಿ ಮಕ್ಕಳೆಲ್ಲರನ್ನೂ ಕಂಡಿದ್ದೇನೆ. ಅವರು ಜೀವನದಲ್ಲಿ ಸುಖವಾಗಿದ್ದಾರೆ. ಹೀಗಾಗಿ ನಾನು ಸಮಾಧಿಗೆ ತೆರಳುವುದು ಸೂಕ್ತ ಎಂದು ಭಾವಿಸಿದ್ದೆ ಎಂದು ಲಾಚಿರೆಡ್ಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಪೊಲೀಸರಲ್ಲೂ, ಇದೇ ಪ್ರಶ್ನೆ ಕೇಳಿ, ಎಲ್ಲರ ಮೊಗದಲ್ಲಿ ಮುಗುಳ್ನಗೆ ತರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...