alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ ಪೊಲೀಸ್ ಅಧಿಕಾರಿಯನ್ನೂ ವರ್ಗಾವಣೆ ಮಾಡಿದೆ ಇಲಾಖೆ

ಆಂಧ್ರಪ್ರದೇಶದ ವಿಜಯವಾಡದಲ್ಲಿ ಪೊಲೀಸ್ ಇಲಾಖೆ ಮಾಡಿರೋ ಪ್ರಮಾದವೊಂದು ನಗೆಪಾಟಲಿಗೀಡಾಗಿದೆ. ಈಗಾಗ್ಲೇ ಮೃತಪಟ್ಟಿರುವ ಪೊಲೀಸ್ ಅಧಿಕಾರಿಗೆ ಇಲಾಖೆ ವರ್ಗಾವಣೆ ಆದೇಶ ನೀಡಿದೆ. ಡಿ.ರಾಮಾಂಜನೇಯುಲು ಎಂಬುವವರಿಗೆ ವರ್ಗಾವಣೆ ಆದೇಶ ನೀಡಲಾಗಿದ್ದು, ಅವರು 6 ತಿಂಗಳ ಹಿಂದೆಯೇ ಮೃತಪಟ್ಟಿದ್ದಾರೆ.

ಒಟ್ಟು 16 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ 14ನೇ ಸ್ಥಾನ ರಾಮಾಂಜನೇಯುಲು ಅವರದ್ದಾಗಿತ್ತು. ಮಂಗಳಗಿರಿ ಮುಖ್ಯ ಕಚೇರಿಗೆ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ವರ್ಗಾವಣೆ ಆದೇಶದ ಪ್ರತಿಗೆ ಖುದ್ದು ಪೊಲೀಸ್ ಮಹಾನಿರ್ದೇಶಕರಾದ ಎನ್.ಸಾಂಬಶಿವ ರಾವ್ ಸಹಿ ಹಾಕಿದ್ದಾರೆ.

ತಿರುಮಲದ ವಿಶೇಷ ಶಾಖೆಯಲ್ಲಿ ರಾಮಾಂಜನೇಯುಲು ಉಪ ಪೊಲೀಸ್ ಅಧೀಕ್ಷಕರಾಗಿದ್ದರು. ಅನಾರೋಗ್ಯದಿಂದಾಗಿ 6 ತಿಂಗಳ ಹಿಂದೆಯೇ ಮೃತಪಟ್ಟಿದ್ದಾರೆ. ಅವರ ಅಂತ್ಯಸಂಸ್ಕಾರದಲ್ಲಿ ಹಿರಿಯ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು. ಆದ್ರೀಗ ಹಿರಿಯ ಅಧಿಕಾರಿಗಳೇ ರಾಮಾಂಜನೇಯುಲು ಅವರಿಗೆ ವರ್ಗಾವಣೆ ಆದೇಶ ಕಳಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...