alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗನ ಸೋಗಿನಲ್ಲಿ ಅಪ್ರಾಪ್ತೆ ಮಾಡಿದ್ದಾಳೆ ಇಂಥಾ ಕೆಲಸ….

ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಅಪ್ರಾಪ್ತೆಯೊಬ್ಬಳು ಯುವಕನ ಸೋಗಿನಲ್ಲಿ ಮೂವರನ್ನು ಮದುವೆಯಾಗಿದ್ದಾಳೆ. ಮೂರನೇ ಪತ್ನಿ ಈಗ ಅಪ್ರಾಪ್ತೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ವಂಚನೆ ಬೆಳಕಿಗೆ ಬಂದಿದೆ.

ಬಿ.ರಮಾದೇವಿ ಎಂಬ ಅಪ್ರಾಪ್ತೆ ತಮಿಳುನಾಡಿನ ಮಿಲ್ ಒಂದರಲ್ಲಿ ಕೆಲಸ ಮಾಡ್ತಾ ಇದ್ಲು. ನಂತರ ಪುಲಿವೆಂಡುಲದಲ್ಲಿರೋ ಮಿಲ್ ನಲ್ಲಿ ಕೆಲಸಕ್ಕೆ ಸೇರಿದ್ಲು. ಅಲ್ಲಿ  ಭೀಮಗುಂಡಂ ಗ್ರಾಮದ 17 ವರ್ಷದ ರಂಭಾ ಎಂಬಾಕೆಯ ಜೊತೆಗೆ ರಮಾದೇವಿ ಸ್ನೇಹ ಬೆಳೆಸಿದ್ದಾಳೆ .

ಆದ್ರೆ ತಾನೊಬ್ಬ ಹುಡುಗ ಅಂತಾನೇ ರಮಾದೇವಿ ಪೋಸು ಕೊಟ್ಟಿದ್ಲು. ಹುಡುಗನ ವೇಷದಲ್ಲೇ ಬರುತ್ತಿದ್ಲು. ಇಬ್ಬರ ಮಧ್ಯೆ ಪ್ರೀತಿ ಬೆಳೆದು ಮದುವೆಯಾಗಿದ್ದಾರೆ. ಆಕೆ ಹುಡುಗನಲ್ಲ ಹುಡುಗಿ ಅನ್ನೋದು ಮದುವೆಯಾಗಿ 2 ತಿಂಗಳ ಬಳಿಕ ರಂಭಾಗೆ ಗೊತ್ತಾಗಿದೆ.

ನಂತರ ರಂಭಾ ತನ್ನ ಹೆತ್ತವರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಹಿಂದೆ ಕೂಡ ಇಬ್ಬರು ಹುಡುಗಿಯರನ್ನು ರಮಾದೇವಿ ಮದುವೆಯಾಗಿದ್ದಾಳೆ. ತಾನು ಹುಡುಗನೆಂದು ಸುಳ್ಳು ಹೇಳಿ ಜ್ಯೋತಿ  ಮತ್ತು ವೃಂದಾ ಎಂಬ ಇಬ್ಬರು ಅಪ್ರಾಪ್ತೆಯರನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...