alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿಯ ಕೈ ಹಿಡಿದೆಳೆದು ಒದೆ ತಿಂದ ಮಂತ್ರಿ ಮಗ

ravela susheel

ಹೈದರಾಬಾದ್: ಕುಡಿದ ಮತ್ತಿನಲ್ಲಿದ್ದ ಮಂತ್ರಿಯೊಬ್ಬರ ಮಗ ರಸ್ತೆಯಲ್ಲಿ ನಡೆದು ಬರುತ್ತಿದ್ದ ಶಾಲಾ ಶಿಕ್ಷಕಿಯೊಬ್ಬರ ಕೈ ಹಿಡಿದೆಳೆದಿದ್ದು, ಈ ಸಂದರ್ಭದಲ್ಲಿ ಶಿಕ್ಷಕಿ ಕೂಗಿಕೊಂಡ ವೇಳೆ ನೆರವಿಗೆ ಧಾವಿಸಿದ ಸಾರ್ವಜನಿಕರು ಆತನಿಗೆ ಧರ್ಮದೇಟು ಕೊಟ್ಟಿರುವ ಘಟನೆ ನಡೆದಿದೆ.

ಆಂಧ್ರ ಪ್ರದೇಶ ಸರ್ಕಾರದ ಸಮಾಜ ಕಲ್ಯಾಣ ಸಚಿವ ರವೇಲಾ ಕಿಶೋರ್ ಬಾಬು ಅವರ ಪುತ್ರ ರವೇಲಾ ಸುಶೀಲ್ ಎಂಬಾತನೇ ಶಿಕ್ಷಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಒದೆ ತಿಂದವನಾಗಿದ್ದು, ಆತನ ವಿರುದ್ದ ಈಗ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಯುವತಿ, ಬಂಜಾರಾ ಹಿಲ್ಸ್ ನ ಅಂಬೇಡ್ಕರ್ ನಗರದಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ರವೇಲಾ ಸುಶೀಲ್ ಆಕೆಯ ಕೈ ಹಿಡಿದೆಳೆದಿದ್ದಾನೆ. ಆಗ ಶಿಕ್ಷಕಿ ಜೋರಾಗಿ ಕೂಗಿಕೊಂಡಿದ್ದು, ಸ್ಥಳದಲ್ಲಿದ್ದವರು ಕೂಡಲೇ ಧಾವಿಸಿ ಬಂದು ರವೇಲಾ ಸುಶೀಲ್ ನನ್ನು ಥಳಿಸಿದ್ದಾರೆ.

ಬಳಿಕ ಆತನನ್ನು ಠಾಣೆಗೆ ಕರೆದುಕೊಂಡು ಹೋದ ವೇಳೆ ಮೊದಲಿಗೆ ದೂರು ದಾಖಲಿಸಲು ಹಿಂಜರಿದ ಪೊಲೀಸರು, ಬಳಿಕ ಸಾರ್ವಜನಿಕರ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಘಟನೆ ಕುರಿತು ಸ್ಪಷ್ಟನೆ ನೀಡಿರುವ ರವೇಲಾ ಸುಶೀಲ್, ತಮ್ಮ ಕಾರಿಗೆ ನಾಯಿಯೊಂದು ಅಡ್ಡಬಂದಿದ್ದು, ಚಾಲಕ ಬ್ರೇಕ್ ಹಾಕಿದಾಗ ಕೆಳಗಿಳಿದ ತಾನು ಅದನ್ನು ಕೈಗೆತ್ತಿಕೊಂಡಿದ್ದೆ. ಅಷ್ಟರಲ್ಲೇ ಅಲ್ಲಿಯೇ ಇದ್ದ ಯುವತಿ ಅವಾಚ್ಯವಾಗಿ ನಿಂದಿಸಿ ಸ್ಥಳೀಯರನ್ನು ಸೇರಿಸಿ ಗಲಾಟೆ ಎಬ್ಬಿಸಿದ್ದಾಳೆ. ಇದು ರಾಜಕೀಯ ದುರುದ್ದೇಶದಿಂದ ನಡೆದಿರುವ ಪ್ರಕರಣ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...