alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿಯ ಹೊಟ್ಟೆಯೊಳಗೇ ಕತ್ತರಿ ಬಿಟ್ಟ ವೈದ್ಯರು

ನೆಲ್ಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಆಪರೇಷನ್ ಬಳಿಕ ವೈದ್ಯರು ರೋಗಿಯ ಹೊಟ್ಟೆಯೊಳಗೆ ಎರಡು ಕತ್ತರಿಗಳನ್ನೇ ಬಿಟ್ಟಿದ್ದ ಪ್ರಕರಣ ನಡೆದಿದೆ. ಸಿರೀಕಾಪು ಚಲಪತಿ ಎಂಬ 45  ವರ್ಷದ ವ್ಯಕ್ತಿ ಅಪೆಂಡಿಸೈಟಿಸ್ ನಿಂದ ಬಳಲುತ್ತಿದ್ದ.

ಆತನ ಕರುಳಿಗೇ ಅದು ಹಾನಿ ಮಾಡಿತ್ತು. ಹಾಗಾಗಿ ಅಕ್ಟೋಬರ್ 3ರಂದು ಚಲಪತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಪೆಂಡಿಕ್ಸ್ ಹಾಗೂ ಹಾನಿಗೊಳಗಾಗಿದ್ದ ಕರುಳಿನ ಭಾಗವನ್ನು ವೈದ್ಯರು ಹೊರತೆಗೆದಿದ್ದಾರೆ. ನಂತರ ರೋಗಿಯನ್ನು ಮನೆಗೆ ಕಳಿಸಿಕೊಟ್ಟಿದ್ದಾರೆ.

ಕೆಲ ದಿನಗಳ ನಂತರ ಚಲಪತಿಗೆ ಮತ್ತೆ ತೀವ್ರ ಹೊಟ್ಟೆ ನೋವು ಶುರುವಾಗಿತ್ತು. ಸ್ಕ್ಯಾನಿಂಗ್ ನಡೆಸಿದಾಗ ದೊಡ್ಡ ಗಾತ್ರದ ಎರಡು ಕತ್ತರಿಗಳನ್ನು ಹೊಟ್ಟೆಯಲ್ಲೇ ಬಿಟ್ಟಿರೋದು ಗೋಚರಿಸಿದೆ. ತಮ್ಮಿಂದಾದ ಪ್ರಮಾದವನ್ನು ಒಪ್ಪಿಕೊಂಡ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಕತ್ತರಿಯನ್ನು ಹೊರತೆಗೆದಿದ್ದಾರೆ. ಆದ್ರೆ ಚಲಪತಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...