alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜಿಗೆ ಚಕ್ಕರ್ ಹೊಡೆದು ಯುವಕನೊಂದಿಗೆ ಸುತ್ತಲು ಹೋದ ವಿದ್ಯಾರ್ಥಿನಿ ಬಳಿಕ ಮಾಡಿದ್ದೇನು?

ಸಿಸಿ ಟಿವಿ ಕ್ಯಾಮರಾಗಳು ಕೇವಲ ಆರೋಪಿಗಳ ಗುರುತು ಪತ್ತೆ ಹಿಡಿಯೋದಕ್ಕಷ್ಟೆ ಬಳಕೆಯಾಗ್ತಿಲ್ಲ. ಕೆಲವೊಮ್ಮೆ ಅಮಾಯಕರ ಪಾಲಿಗೂ ಅವು ವರದಾನವಾಗ್ತಿದೆ. ಇದಕ್ಕೆ ಪೂರಕವಾದ ಒಂದು ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕದ್ರಿಯಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕಳೆದ ಮಂಗಳವಾರ ಕಾಲೇಜಿಗೆ ಗೈರು ಹಾಜರಾದ ಬಗ್ಗೆ ಆಡಳಿತ ಮಂಡಳಿ ಆಕೆಯ ಪೋಷಕರಿಗೆ ಎಸ್ಎಂಎಸ್ ಮೂಲಕ ತಿಳಿಸಿತ್ತು.

ಮಂಗಳವಾರ ತಡರಾತ್ರಿ ಆಕೆ ಮನೆಗೆ ತಲುಪಿದ್ದಳು. ಈ ಬಗ್ಗೆ ಯುವತಿಯನ್ನ ಆಕೆಯ ಪೋಷಕರು ವಿಚಾರಿಸಿದಾಗ ಕಾಲೇಜಿನ ಬಾಟ್ನಿ ಉಪನ್ಯಾಸಕರಾದ ರಮೇಶ್ ನಾಯಕ್ ಎಂಬುವವರು ತನ್ನನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕೈ ಕಾಲು ಕಟ್ಟಿ ಹಾಕಿ ಆನಂತರ ತನ್ನನ್ನು ರೈಲ್ವೆ ಬ್ರಿಡ್ಜ್ ಒಂದರ ಕೆಳಗೆ ಎಸೆದು ಹೋಗಿದ್ದರು ಅಂತ ಹೇಳ್ತಾಳೆ.

ಈ ಮಾತನ್ನು ನಂಬಿದ ಯುವತಿಯ ಪೋಷಕರು ಆಗಸ್ಟ್ 27ನೇ ತಾರೀಕು ಕಾಲೇಜಿಗೆ ತೆರಳಿ ಉಪನ್ಯಾಸಕರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿ ಹಲ್ಲೆ ನಡೆಸಿ ಆನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಬರ್ತಾರೆ. ವಿಚಾರಣೆಯ ಸಂದರ್ಭದಲ್ಲಿ ರಮೇಶ್ ತಾನು ಅಮಾಯಕ. ಬೇಕಾದ್ರೆ ಕಾಲೇಜಿನ ಸಿಸಿ ಟಿವಿ ಫುಟೇಜ್ ಚೆಕ್ ಮಾಡಿ ಅಂತ ಪೊಲೀಸರಿಗೆ ಹೇಳ್ತಾರೆ.

ಹಾಗಾಗಿ ಪೊಲೀಸರು ಕಾಲೇಜಿಗೆ ತೆರಳಿ ಸಿಸಿ ಟಿವಿ ಫುಟೇಜ್ ಚೆಕ್ ಮಾಡಿದಾಗ ಇಡೀ ದಿನ ರಮೇಶ್ ನಾಯಕ್ ಕಾಲೇಜಿನಲ್ಲೇ ಇದ್ದದ್ದು ಗೊತ್ತಾಗುತ್ತದೆ. ಆನಂತರ ಪೊಲೀಸರು ಯುವತಿಯನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದ್ದು, ಯುವಕನೊಬ್ಬನ ಜೊತೆ ಆಕೆ ಸುತ್ತೋದಕ್ಕೆ ಹೋಗಿದ್ದೆ ಅಂತ ತಪ್ಪೊಪ್ಪಿಕೊಂಡಿದ್ದಾಳೆ. ಬಳಿಕ ಪೊಲೀಸರು ರಮೇಶ್ ರನ್ನ ಬಿಡುಗಡೆ ಮಾಡಿದ್ದಾರೆ.

ಮರುದಿನ ಕಾಲೇಜಿಗೆ ಬಂದು ಯುವತಿಯ ತಂದೆ ಎಲ್ಲರ ಎದುರು ರಮೇಶ್ ನಾಯಕ್ ಅವರ ಕ್ಷಮೆ ಕೇಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕ್ಲೀನ್ ಇಮೇಜ್ ಇರುವ ಉಪನ್ಯಾಸಕರ ಮೇಲೆ ಹಲ್ಲೆ ಮಾಡಿದ ರೀತಿಯನ್ನ ಪ್ರಶ್ನೆ ಮಾಡಿದ್ದಾರೆ. ಆನಂತರ ಮತ್ತೆ ಪೊಲೀಸರು ಮಧ್ಯೆ ಪ್ರವೇಶಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. ಯುವತಿಯ ಭವಿಷ್ಯದ ದೃಷ್ಟಿಯಿಂದ ಪ್ರಕರಣವನ್ನ ರಾಜಿ ಮೂಲಕ ಪೊಲೀಸರು ಬಗೆಹರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...