alex Certify
ಕನ್ನಡ ದುನಿಯಾ       Mobile App
       

Kannada Duniya

ವಿಷಾನಿಲ ಸೇವಿಸಿ 7 ಮಂದಿ ದಾರುಣ ಸಾವು

ಚಿತ್ತೂರು: ಕೋಳಿಫಾರಂನಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವಿಷಾನಿಲ ಸೇವಿಸಿ, 7 ಮಂದಿ ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪಲಮನೇರು ಸಮೀಪದ ಮುರಂಪಳ್ಳಿಯಲ್ಲಿ ನಡೆದಿದೆ.

ರಮೇಶ್, ರೆಡ್ಡಪ್ಪ, ರಾಮಚಂದ್ರ, ಬಾಬು, ಕೇಶವ, ಗೋವಿಂದಸ್ವಾಮಿ ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಕೋಳಿಫಾರಂಗೆ ಹೊಂದಿಕೊಂಡಂತೆ ಇರುವ ನೆಲ ಮಟ್ಟದಲ್ಲಿದ್ದ ತೊಟ್ಟಿಯನ್ನು ಕ್ಲೀನ್ ಮಾಡಲು ಈ ಕಾರ್ಮಿಕರು ಇಳಿದಿದ್ದು, ಒಬ್ಬರಾದ ನಂತರ ಮತ್ತೊಬ್ಬರು ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆ.

ಪಲಮನೇರು ಪೊಲೀಸರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಟ್ಯಾಂಕ್ ಅನ್ನು ತೆರೆದು, ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಈ ವೇಳೆಗೆ ಕಾರ್ಮಿಕರು ಮೃತಪಟ್ಟಿದ್ದು, ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ. ಅಸ್ವಸ್ಥಗೊಂಡ ಕಾರ್ಮಿಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...