alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಹೆಂಡತಿ-ಮಕ್ಕಳನ್ನೇ ಮಾರಾಟ ಮಾಡಲು ಮುಂದಾಗಿದ್ದ ಭೂಪ

ಕುಡುಕ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಕ್ಕಳನ್ನು ಮಾರಲು ಮುಂದಾಗಿದ್ದ ಘಟನೆ ಆಂಧ್ರದಲ್ಲಿ ನಡೆದಿದೆ. ವೃತ್ತಿಯಿಂದ ಆಟೋ ಡ್ರೈವರ್ ಆಗಿದ್ದ ವ್ಯಕ್ತಿ ತನ್ನ ಪತ್ನಿ, ನಾಲ್ವರು ಹೆಣ್ಣು ಮಕ್ಕಳು ಮತ್ತೊಂದು ಗಂಡು ಮಗುವನ್ನು ಮಾರೋದಾಗಿ ಬಾಂಡ್ ಪೇಪರ್ನಲ್ಲಿ ಸಹಿ ಮಾಡಿದ್ದ.

15 ಲಕ್ಷ ರುಪಾಯಿ ಸಾಲ ತೀರಿಸುವ ಸಲುವಾಗಿ ಹಲವರಿಗೆ ಮಾರಾಟ ಮಾಡೋದಕ್ಕೆ ಮುಂದಾಗಿದ್ದ. 12 ವರ್ಷ ವಯಸ್ಸಿನ ಮಗಳನ್ನ 1 ಲಕ್ಷ ರೂಪಾಯಿಗೆ ಮಾರುವ ಉದ್ದೇಶ ಹೊಂದಿದ್ದ. ಪತ್ನಿಯನ್ನ ತನ್ನ ಸೋದರ ಸಂಬಂಧಿಗೆ ಐದು ಲಕ್ಷ ರೂಪಾಯಿಗೆ ಮಾರೋದಕ್ಕೆ ಅಗ್ರಿಮೆಂಟ್ ಕೂಡ ಮಾಡಿಕೊಂಡಿದ್ದ. ಅಗ್ರಿಮೆಂಟ್ನಲ್ಲಿದ್ದ ಷರತ್ತುಗಳನ್ನ ಒಪ್ಪಿ ಸಹಿ ಮಾಡಿದ್ದ. ಪತ್ನಿಗೆ ಕೂಡ ಸಹಿ ಮಾಡುವಂತೆ ಸೂಚಿಸಿದ್ದ.

ಆಗ ಗಂಡನ ನಡೆಯಿಂದ ಭಯಗೊಂಡ ಪತ್ನಿ ಮಕ್ಕಳೊಂದಿಗೆ ಮನೆ ಬಿಟ್ಟು ಪೋಷಕರ ಬಳಿ ಬಂದಿದ್ದಾಳೆ. ಈ ವಿಚಾರವನ್ನ ತಿಳಿದ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ಮಹಿಳೆಯ ನೆರವಿಗೆ ಧಾವಿಸಿ ಮಹಿಳೆ ಮತ್ತು ಮಕ್ಕಳನ್ನ ರಕ್ಷಿಸಿದ್ದಾರೆ. ಪೊಲೀಸರು ಮಹಿಳೆ ಮತ್ತು ಮಕ್ಕಳನ್ನ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಮತ್ತೆ ಪತಿ-ಪತ್ನಿಯ ನಡುವೆ ಸಾಮರಸ್ಯ ಮೂಡಿಸಲು ಪ್ರಯತ್ನ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...