alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಸಕನ ಬೆಂಬಲಿಗರಿಂದ ನಡುರಸ್ತೆಯಲ್ಲೇ ಪತ್ರಕರ್ತನ ಮೇಲೆ ಹಲ್ಲೆ

andra

ವಿಜಯವಾಡ: ಶಾಸಕನ ವಿರುದ್ಧ ವರದಿ ಪ್ರಕಟಿಸಿದ್ದಕ್ಕೆ, ಪತ್ರಕರ್ತನೊಬ್ಬನ ಮೇಲೆ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಸ್ಥಳೀಯ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂ. ನಾಗಾರ್ಜುನ ರೆಡ್ಡಿ ತಮ್ಮದೇ ಪತ್ರಿಕೆ ನಡೆಸುತ್ತಿದ್ದು, ಅವರ ಮೇಲೆ ಹಲ್ಲೆ ಮಾಡಲಾಗಿದೆ.

ನಾಗಾರ್ಜುನ ರೆಡ್ಡಿ, ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ಶಾಸಕ ಅಮಾಂಚಿ ಕೃಷ್ಣ ಮೋಹನ್ ಅವರ ಕುರಿತು ವರದಿ ಮಾಡಿದ್ದರು.

ಇದರಿಂದ ಆಕ್ರೋಶಗೊಂಡ ಶಾಸಕನ ಸಹೋದರ ಮತ್ತವನ ಪಟಾಲಂ, ನಡುರಸ್ತೆಯಲ್ಲೇ ನಾಗಾರ್ಜುನ ರೆಡ್ಡಿಯ ಮೇಲೆ ಬಡಿಗೆಗಳಿಂದ ಹಲ್ಲೆ ಮಾಡಿದ್ದಾರೆ.

ಅಲ್ಲಿದ್ದವರು ತಡೆಯಲು ಹೋಗದೇ ಸುಮ್ಮನೆ ವೀಕ್ಷಿಸಿದ್ದು, ಕೆಲವರು ತಮ್ಮ ಮೊಬೈಲ್ ಗಳಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ನಾಗಾರ್ಜುನ ರೆಡ್ಡಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...