alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 149 ರೂಪಾಯಿಗೆ ತಿಂಗಳಿಡಿ ಇಂಟರ್ ನೆಟ್..!

ap inter

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್. ಅಲ್ಲದೇ, ಲ್ಯಾಪ್ ಟಾಪ್, ಕಂಪ್ಯೂಟರ್ ಕೂಡ ಹೆಚ್ಚು ಬಳಕೆಯಲ್ಲಿದ್ದು, ಇವುಗಳಿದ್ದ ಮೇಲೆ ಸಾಮಾನ್ಯವಾಗಿ ಇಂಟರ್ ನೆಟ್ ಕೂಡ ಪೂರಕವಾಗಿಯೇ ಇರುತ್ತದೆ. ಈಚೆಗೆ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ಆದರೆ, ನೆಟ್ ಬಳಸುವುದು ಜನಸಾಮಾನ್ಯರಿಗೆ ತುಸು ಕಷ್ಟವೇ. ಇದನ್ನು ಮನಗಂಡ ಆಂಧ್ರಪ್ರದೇಶ ಸರ್ಕಾರ, ಅತಿ ಕಡಿಮೆ ಬೆಲೆಯಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲು ಮುಂದಾಗಿದೆ. ಒಂದು ತಿಂಗಳಿಗೆ ಕೇವಲ 149 ರೂಪಾಯಿಯಲ್ಲಿ ತಿಂಗಳಿಡಿ ಇಂಟರ್ ನೆಟ್ ಸೌಲಭ್ಯ ಒದಗಿಸುವ ಯೋಜನೆಯನ್ನು ಕಾರ್ಯಗತಗೊಳಿಸಿದೆ. ವಿಶಾಖಪಟ್ಟಣಂ, ಶ್ರೀಕಾಕುಳಂ, ವಿಜಯನಗರಂ ವ್ಯಾಪ್ತಿಯಲ್ಲಿ ಕೇವಲ 149 ರೂಪಾಯಿಗೆ ಇಂಟರ್ ನೆಟ್ ಸಿಗಲಿದೆ ಎಂದು ಯೋಜನೆಗೆ ಚಾಲನೆ ನೀಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಮನೆ ಬಳಕೆಗೆ 15Mbps ವೇಗದ ಬ್ರಾಡ್ ಬ್ಯಾಂಡ್ ಕನೆಕ್ಷನ್ ತಿಂಗಳಿಗೆ 149 ರೂ.ನಲ್ಲಿ ಸಿಗಲಿದೆ. ಅಲ್ಲದೇ, ಕಚೇರಿಗಳಿಗೆ 999 ರೂಪಾಯಿಗಳಿಗೆ 100 Mbps ವೇಗದ ಬ್ರಾಡ್ ಬ್ಯಾಂಡ್ ಸೌಲಭ್ಯ ತಿಂಗಳಿಗೆ ಸಿಗಲಿದೆ. ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದಲ್ಲಿ ಸುಲಭ ದರದಲ್ಲಿ ಸಿಗುವ ಇಂಟರ್ ನೆಟ್ ಸೌಲಭ್ಯ ಇದಾಗಿದೆ.

ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಲಾಗುವುದು. ಚಂದ್ರಬಾಬು ನಾಯ್ಡು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ಕೊಡುತ್ತಾರೆ. ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೈದರಾಬಾದ್, ಐಟಿ ವಲಯದಲ್ಲಿ ಉನ್ನತ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಮತ್ತೆ ತಾಂತ್ರಿಕ ಯೋಜನೆಗಳಿಗೆ ಒತ್ತು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...