alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ತಾಯಿ ಪಡೆದ ದಂಪತಿ ಮಾಡಿದ್ದಾರೆ ಇಂಥಾ ಕೆಲಸ

surrogate

ಆಂಧ್ರಪ್ರದೇಶದ ಗುಂಟೂರಿನ ದಂಪತಿ ಬಾಡಿಗೆ ತಾಯಿಯನ್ನು ನಡುನೀರಲ್ಲೇ ಕೈಬಿಟ್ಟು ಪರಾರಿಯಾಗಿದ್ದಾರೆ. ಒಪ್ಪಂದದಂತೆ ಆಕೆಗೆ ಹಣವನ್ನು ಕೂಡ ನೀಡಿಲ್ಲ. ಕಳೆದ ನವೆಂಬರ್ ನಲ್ಲಿ ಮಕ್ಕಳಿಲ್ಲದ ದಂಪತಿಯೊಬ್ರು 20 ವರ್ಷದ ವೆಂಕಟಮ್ಮ ಎಂಬಾಕೆಯನ್ನು ಬಾಡಿಗೆ ತಾಯಿಯಾಗಿ ಪಡೆದಿದ್ರು.

ಮಗು ಹೆತ್ತು ಕೊಟ್ರೆ ಹೆರಿಗೆ ನಂತರ 3 ಲಕ್ಷ ಹಣ ಕೊಡೋದಾಗಿ ಒಪ್ಪಂದ ಮಾಡಿಕೊಂಡಿದ್ರು. ಅದರಂತೆ ವೆಂಕಟಮ್ಮ ಆ ದಂಪತಿಯ ಮಗುವಿಗಾಗಿ ಗರ್ಭಧರಿಸಿದ್ಲು. ಈ ವಿಚಾರ ಮೊದಲು ವೆಂಕಟಮ್ಮನ ಪತಿ ಲಕ್ಷ್ಮಣ್ ಗೂ ಗೊತ್ತಿರಲಿಲ್ಲ.

3 ತಿಂಗಳುಗಳ ಕಾಲ ಬೇರೆ ಬೇರೆ ಆಸ್ಪತ್ರೆಗೆ ವೆಂಕಟಮ್ಮನನ್ನು ದಂಪತಿ ಕರೆದೊಯ್ದಿದ್ದಾರೆ. ನಂತರ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿದ್ದಾರೆ, ನಯಾಪೈಸೆ ಹಣವನ್ನು ಕೂಡ ಕೊಟ್ಟಿಲ್ಲ. ಅಷ್ಟರಲ್ಲಾಗ್ಲೇ ವೆಂಕಟಮ್ಮನಿಗೆ ಹೆರಿಗೆ ದಿನ ಹತ್ತಿರ ಬಂದಿತ್ತು. ಆಗ ತಾನು ಬಾಡಿಗೆ ತಾಯಿಯಾಗ್ತಿರೋ ವಿಷಯವನ್ನು ಆಕೆ ಪತಿಗೆ ತಿಳಿಸಿದ್ದಾಳೆ.

ಜುಲೈ 20ರಂದು ಬಾಡಿಗೆ ತಾಯಿಗೆ ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿದೆ. ಆದ್ರೆ ಮಗುವಿನ ನಿಜವಾದ ಪೋಷಕರ ಪತ್ತೆಯೇ ಇಲ್ಲ. ಹೆಣ್ಣುಮಗು ಅನ್ನೋದು ಗೊತ್ತಾಗಿ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ.  ಈ ಬಗ್ಗೆ ಲಕ್ಷ್ಮಣ್ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಆದ್ರೆ ಅಧಿಕೃತ ಒಪ್ಪಂದ ಮಾಡಿಕೊಳ್ಳದೇ ಇದ್ದಿದ್ರಿಂದ ಮುಂದೇನು ಅನ್ನೋ ಆತಂಕ ಬಡ ದಂಪತಿಯನ್ನು ಕಾಡುತ್ತಿದೆ.

ವೆಂಕಟಮ್ಮ ಹಾಗೂ ಲಕ್ಷ್ಮಣ್ ದಂಪತಿ ಸುಳ್ಳು ಹೇಳ್ತಿದ್ದಾರಾ ಅನ್ನೋದನ್ನು ಪತ್ತೆ ಮಾಡಲು ಡಿಎನ್ ಎ ಪರೀಕ್ಷೆಗೂ ಅಧಿಕಾರಿಗಳು ಮುಂದಾಗಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಸರೋಗಸಿ ಚಿಕಿತ್ಸೆ ನೀಡಿದ ಆಸ್ಪತ್ರೆ ವಿರುದ್ಧವೂ ಕ್ರಮ ಕೈಗೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...