alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕಾರಣಿಗಳ ನಾಲಿಗೆ ಕತ್ತರಿಸುತ್ತೇನೆಂದು ಗುಡುಗಿದ ಪೊಲೀಸ್ ಅಧಿಕಾರಿ

ಅಮರಾವತಿ: ತಮ್ಮನ್ನು ನಡೆಸಿಕೊಳ್ಳುತ್ತಿರುವುದಕ್ಕೆ ರೋಸಿ ಹೋದ ಪೊಲೀಸ್ ಅಧಿಕಾರಿಯೊಬ್ಬರು ರಾಜಕಾರಣಿಗೆ ಧಮಕಿ ಹಾಕಿದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

ಬಹಳ ಸಹಿಸಿಕೊಂಡಿದ್ದೇನೆ, ಇನ್ನೂ ಮಿತಿಮೀರಿದರೆ ಸಹಿಸಿಕೊಳ್ಳುವುದಿಲ್ಲ. ಚುನಾಯಿತ ಪ್ರತಿನಿಧಿಗಳೇನಾದರೂ ನಮ್ಮ ಪಡೆಯ ಭಾವನೆಗಳಿಗೆ ಧಕ್ಕೆ ತರುವಂತಹ, ನೈತಿಕತೆಯನ್ನು ಪ್ರಶ್ನಿಸುವಂತಹ ಘಟನೆಗಳು ನಡೆದದ್ದೇ ಆದಲ್ಲಿ, ಅವರ ನಾಲಗೆಯನ್ನು ಕತ್ತರಿಸಿ ಹಾಕುತ್ತೇವೆ. ಜಾಗ್ರತೆ ಎಂದು ಸುದ್ದಿಗೋಷ್ಠಿಯಲ್ಲಿ ಆಬ್ಬರಿಸಿದ್ದಾರೆ ಅನಂತಪುರ ಜಿಲ್ಲೆಯ ಕದಿರಿಯ ಪೊಲೀಸ್ ಇನ್ ಸ್ಪೆಕ್ಟರ್ ಮಾಧವ್ ಎಂಬವರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಅಲ್ಲಿನ ಸಂಸದ ಜೆ.ಸಿ. ದಿವಾಕರ್ ರೆಡ್ಡಿ, ಹೌದಾ ಎಲ್ಲಿಗೆ ಬರಬೇಕು ಹೇಳಿ, ಬರುತ್ತೇವೆ ನೋಡೇ ಬಿಡೋಣ ಎಂದು ಸವಾಲು ಎಸೆದಿದ್ದಾರೆ. ಪೊಲೀಸರ ಮತ್ತು ಜನಪ್ರತಿನಿಧಿಗಳ ನಡುವಿನ ಈ ಗಲಾಟೆ ಈಗ ತಾರಕಕ್ಕೇರಿದೆ. ಇನ್ಸ್ ಪೆಕ್ಟರ್ ಮಾಧವ್ ಮೇಲೆ ಸಂಸದ ರೆಡ್ಡಿ ದೂರು ನೀಡಲು ಮುಂದಾಗಿದ್ದರು. ಆದರೆ ಆವರ ದೂರನ್ನು ಪೊಲೀಸರು ಇನ್ನೂ ದಾಖಲಿಸದೇ ಇರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.

ತಡಿಪಾತ್ರಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ವಿಜಯ ಕುಮಾರ್ ಹೇಳಿಕೆಯ ಪ್ರಕಾರ ಇತ್ತೀಚೆಗೆ ಇಲ್ಲಿನ ಗ್ರಾಮವೊಂದರಲ್ಲಿ ಗುಂಪು ಘರ್ಷಣೆಯಾಗಿದ್ದಾಗ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವುದನ್ನು ಬಿಟ್ಟು ನಪುಂಸಕರಂತೆ ವರ್ತಿಸಿದರು ಎಂದು ಹೇಳಿದ್ದರಂತೆ. ಇದು ಪೊಲೀಸರನ್ನು ಕೆರಳಿಸಿತ್ತು. ಈಗ ನಡೆಯುತ್ತಿರುವುದು ಅದರ ನಂತರದ ಬೆಳವಣಿಗೆ. ಇದನ್ನು ನಾನು ಇಲ್ಲಿಗೇ ಬಿಡುವುದಿಲ್ಲ, ಸರ್ಕಾರದ ಗಮನಕ್ಕೆ ತರುತ್ತೇನೆಂದು ಹಠಗಟ್ಟಿ ಕುಳಿತಿದ್ದಾರಂತೆ ಸಂಸದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...